Mysore
20
overcast clouds
Light
Dark

ತಮಿಳುನಾಡಿಗೆ ಬಿಡುವಷ್ಟು ನೀರು ರಾಜ್ಯದ ಜಲಾಶಯಗಳಲ್ಲಿ ಇಲ್ಲ: ಮಳೆಗಾಗಿ ಪ್ರಾರ್ಥಿಸೋಣ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ತಮಿಳುನಾಡಿಗೆ ಬಿಡುವಷ್ಟು ನೀರು ಕರ್ನಾಟಕದ ಜಲಾಶಯಗಳಲ್ಲಿ ಇಲ್ಲ. ಹೆಚ್ಚು ಮಳೆಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮಲ್ಲಿ ನೀರಿಲ್ಲ. ಮಳೆಯಿಲ್ಲ. ಮಳೆಗಾಗಿ ಪ್ರಾರ್ಥಿಸೋಣ. ನಮ್ಮಲ್ಲಿ ಕೆರೆಗಳನ್ನು ತುಂಬಿಸಲು ಕೂಡ ನೀರಿಲ್ಲ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಒಳಹರಿವು ಕಡಿಮೆಯಿದೆ ಎಂದರು.

ಕರ್ನಾಟಕದಲ್ಲಿ ನೀರಿನ ಕೊರತೆ ಬಹಳಷ್ಟಿದ್ದು, ಈ ಬಾರಿಯ ಮಾನ್ಸೂನ್‌ ಕೂಡ ಸರಿಯಾಗಿ ಆಗಿಲ್ಲ. ರಾಜ್ಯದಲ್ಲಿ ಶೇಕಡಾ.28ರಷ್ಟು ಮಳೆ ಕೊರತೆಯಿದೆ. ಹೀಗಾಗಿ ನೀರು ಬಿಡಲು ಆಗುವುದಿಲ್ಲ.

ಆದ್ದರಿಂದ ಜಲಾಶಯಗಳು ತುಂಬಬೇಕಾದರೆ ಮಳೆ ಆಗಬೇಕು. ಆದ್ದರಿಂದ ಮಳೆಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ಡಿಕೆಶಿ ಮನವಿ ಮಾಡಿದ್ದಾರೆ.