Mysore
14
few clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಕೊನೆ ಕ್ಷಣದಲ್ಲಿ ಯಾರೂ ನನ್ನ ರಕ್ಷಣೆಗೆ ಬರಲಿಲ್ಲ : ಸದಾನಂದಗೌಡ

ಬೆಂಗಳೂರು : ಕೊನೇ ಕ್ಷಣದಲ್ಲಿ ಯಾರು ನನ್ನ ರಕ್ಷಣೆಗೆ ಬಾರದೆ ನನಗೆ ಮುಜುಗರ ಉಂಟು ಮಾಡಿದ್ದಾರೆ ಎಂದು ಸಂಸದ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣ ರಾಜಕಾರಣದಿಂದ ದೂರ ಇರಬೇಕು ಎಂದವನನ್ನು ರಾಜ್ಯದ ಎಲ್ಲಾ ಮುಖಂಡರು ಸೇರಿ ನನ್ನನ್ನು ಚುನಾವಣೆಗೆ ಎಳೆದು ತಂದರು. ಆದರೆ ಕೊನೆ ಕ್ಷಣದಲ್ಲಿ ಯಾರು ನನ್ನ ರಕ್ಷಣೆಗೆ ಬಾರದದ್ದು ನನಗೆ ಮುಜುಗರ ಉಂಟು ಮಾಡುವಂತ ಕೆಸಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ಏರು-ಪೇರು ಸಹಜ. ಆದರೆ ಎಲ್ಲಾ ತಿಳಿದು ಸ್ವಾರ್ಥ ರಾಜಕಾರಣ ಮಾಡಿದಾಗ ಬೇಸರವಾಗುತ್ತದೆ ಎಂದರು.

ರಾಜಕೀಯದ ಮುಂದಿನ ನಡೆ ಬಗ್ಗೆ ಮನೆಯವರೊಂದಿಗೆ ಚರ್ಚಿಸಿ ನಾಳೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಈಶ್ವರಪ್ಪರನ್ನು ಭೇಟಿಯಾಗಿದ್ದೆ:  ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ ಪಕ್ಷ ಕಟ್ಟಿದವರಿಗೆ ಅನ್ಯಾಯವಾಗಿದೆ. ನಾವೆಲ್ಲಾ ಸೇರಿ ಒಟ್ಟಾಗಿ ಹೋಗಿ ಮೇಲ್ಮಟ್ಟದಲ್ಲಿ ಮಾತನಾಡೋಣ ಎಂದಿದ್ದೆ. ಆದರೆ ಅವರು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಹೀಗಾಗಿ ಅದರ ಬಗ್ಗೆ ನಾನೇನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

Tags:
error: Content is protected !!