Mysore
21
clear sky

Social Media

ಬುಧವಾರ, 21 ಜನವರಿ 2026
Light
Dark

ಕೋವಿಡ್‌ ಸಬ್‌ವೇರಿಯಂಟ್‌ ಜೆಎನ್‌.1ಗೆ ಹೆಚ್ಚುವರಿ ಲಸಿಕೆ ಬೇಡ: ಡಾ ಎನ್‌ಕೆ ಅರೋರಾ

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಸಬ್‌ವೇರಿಯಂಟ್ ಜೆಎನ್.1 ಪತ್ತೆಯ ನಡುವೆ, ಸಬ್‌ವೇರಿಯಂಟ್ ವಿರುದ್ಧ ಪ್ರಸ್ತುತ ಯಾವುದೇ ಹೆಚ್ಚುವರಿ ಲಸಿಕೆ ಅಗತ್ಯವಿಲ್ಲ ಎಂದು ಸಾರ್ಕ್‌ ಕೋವಿಡ್‌-2 ಜೀನೋಮಿಕ್ಸ್ ಕನ್ಸೋರ್ಟಿಯಂ ಮುಖ್ಯಸ್ಥ ಡಾ ಎನ್‌ಕೆ ಅರೋರಾ ಹೇಳಿದ್ದಾರೆ.

ದೇಶದ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾತನಾಡಿದ ಡಾ ಅರೋರಾ, “60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು, ಕೊಮೊರ್ಬಿಡಿಟಿಗಳನ್ನು ಹೊಂದಿರುವ ಸಾಧ್ಯತೆ ಇರುವವರು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ನಿಗ್ರಹಿಸುವ ಔಷಧಗಳನ್ನು ಸೇವಿಸುವ ಎಲ್ಲರಿಗೂ ತಡೆಗಟ್ಟುವಿಕೆ ಅಗತ್ಯವಿದೆ ಎಂದು ನಾನು ಹೇಳುತ್ತೇನೆ.

ಅವರು ಇಲ್ಲಿಯವರೆಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ, ಮುನ್ನೆಚ್ಚರಿಕೆ ವಹಿಸಲು ಅವರಿಗೆ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ, ಯಾವುದೇ ಹೆಚ್ಚುವರಿ ಡೋಸ್‌ಗಳ ಅಗತ್ಯವಿಲ್ಲ ಎಂದಿದ್ದಾರೆ.

ಓಮಿಕ್ರಾನ್‌ ನ ವಿವಿಧ ಉಪವಿಭಾಗಗಳು ವರದಿಯಾಗಿವೆ. ಆದರೆ, ಅವುಗಳಲ್ಲಿ ಯಾವುದೂ ತೀವ್ರತೆಯನ್ನು ಹೆಚ್ಚಿಸಿಲ್ಲ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!