Mysore
27
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

2024ಕ್ಕೆ ಭಾರತದಲ್ಲಿ ಮೋದಿ ಸರಕಾರ ಇರಲ್ಲ: ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ : ʼʼ2024 ಕ್ಕೆ ಭಾರತದಲ್ಲಿ ಮೋದಿ ಸರ್ಕಾರ ಇರಲ್ಲʼʼ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ʼʼಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರ್ತಾರೆ ಅಂತ ಅವರ ಲೆಕ್ಕಾಚಾರ ಇದೆ. ಆದರೆ, ನಮ್ಮ ಲೆಕ್ಕಾಚಾರದ 2024 ಕ್ಕೆ ಮೋದಿ ಸರಕಾರ ದೇಶದಲ್ಲಿ ಇರಲ್ಲʼʼ ಎಂದು ತಿಳಿಸಿದರು.

ʼʼಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಅವರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳಿವೆ’’ ಎಂದು ಹೇಳಿದ ಅವರು, ʼʼನೋಡೋಣ ಯಾರ ಲೆಕ್ಕಾಚಾರ ನಿಜ ಆಗುತ್ತೆʼʼ ಎಂದು ನುಡಿದರು‌.

“ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಕೆಲವರು ಬರ್ತೀದ್ದಾರೆ. ನಮಗೇನೂ ಭಯ ಇಲ್ಲ. ಬಿಜೆಪಿ ಬಿಟ್ಟು ಯಾಕೆ ಬರ್ತೀದಾರೆ ಅವರನ್ನೇ ಕೇಳಿ. ಲೋಕಸಭೆ ಚುನಾವಣೆಗೆ ಸಿದ್ದತೆ ನಡೆದಿದಿದ್ದು ಭಾರತೀಯ ಜನತಾ ಪಕ್ಷದಕರ್ಮಕಾಂಡ ಜನರಿಗೆ ಮುಟ್ಟಿಸುತ್ತೇವೆʼʼ ಎಂದರು‌.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!