Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಿಲ್ಲ ಗ್ರೇಸ್‌ ಮಾರ್ಕ್ಸ್‌: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್‌ಎಸ್ಎಲ್‌ಸಿ ಮಕ್ಕಳಿಗೆ ಗ್ರೇಸ್‌ ಮಾರ್ಕ್ಸ್‌ ನೀಡುವುದನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಇಂದು (ಮೇ.17) ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಕೈಕೊಂಡರು. ಈ ವರ್ಷ 20 ಗ್ರೇಸ್‌ ಮಾರ್ಕ್ಸ್ ಕೊಟ್ಟ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಯಾವ ಕಾರಣಕ್ಕೆ 20 ಗ್ರೇಸ್‌ ಮಾರ್ಕ್ಸ್ ಕೊಡಲಾಗಿದೆ ಗ್ರೇಸ್‌ ಮಾರ್ಕ್ಸ್ ಕೊಡಲು ನಿಮಗೆ ಹೇಳಿದ್ದು ಯಾರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ವಿದ್ಯಾರ್ಥಿಗಳು ಅರ್ಹತೆ ಆಧಾರದಲ್ಲಿ ಅಂಕಗಳಿಸಿ ಪ್ರಗತಿ ಸಾಧಿಸಬೇಕು. ಅಲ್ಲದೇ ಗ್ರೇಸ್‌ ಮಾರ್ಕ್ಸ್ ನೀಡುವುದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಸಾಮಾಥ್ಯ ಕಡಿಮೆಯಾಗುತ್ತೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳೇನು ಅನರ್ಹರಾ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅಧಿಕಾರಿಗಳನ್ನ ಖಾರವಾಗಿ ಪ್ರಶ್ನಿಸಿದರು. ಡಿಸಿಎಂ ಮಾತಿಗೆ ಸಿಎಂ ಸಹಮತ ಸೂಚಿಸಿದರು.

300 ಅಂಕ ಪಡೆದಿದ್ದ ಡಿಸಿಎಂ: ಸಭೆಯಲ್ಲಿ ತಾವು ಪಡೆದ ಅಂಕವನ್ನು ಪ್ರಸ್ತಾಪಿಸಿದ ಡಿಸಿಎಂ ಡಿಕೆ ಶಿವಕುಮಾರ್‌, ನಾನು ಕೂಡ 300 ಅಂಕ ಪಡೆದಿದ್ದೆ ಹಾಗೆಂದು ಅಸಮರ್ಥರ ಎಂದು ಪ್ರಶ್ನಿಸಿದರು.

ಕೋವಿಡ್‌ ಸಂದರ್ಭದಲ್ಲಿ 5-10 ಗ್ರೇಸ್‌ ಮಾರ್ಕ್ಸ್ ನೀಡುತ್ತಿದ್ದೆವು. ಈಗ ಅದನ್ನು ಹೆಚ್ಚಿಸಿದ್ದೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಜಾಹಿಸಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಈಗ ಏನು ಕೋವಿಡ್‌ ಇದೆಯೇನ್ರೀ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೇ 9 ರಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌ ನೀಡಲಾಗಿದೆ ಎಂದು ಎಸ್ಎಸ್ಎಲ್‌ಸಿ ಮಂಡಳಿ ತಿಳಿಸಿತ್ತು. ತೇರ್ಗಡೆಯ ಕನಿಷ್ಠ ಅಂಕವನ್ನು 35ರಿಂದ 25ಕ್ಕೆ ಶಿಕ್ಷಣ ಇಲಾಖೆ ಇಳಿಸಿತ್ತು. ಒಂದು ವೇಳೆ ಗ್ರೇಸ್‌ ಮಾರ್ಕ್ಸ್ ನೀಡಲಿಲ್ಲ ಎಂದಿದ್ದರೆ ಇಷ್ಟೂ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡು ಫಲಿತಾಂಶದ ಪ್ರಮಾಣ ಇನ್ನೂ ಕುಸಿಯುತ್ತಿತ್ತು ಎಂದು ಮಂಡಳಿ ತಿಳಿಸಿತು.

ಈಗ ನೀಡಿರುವ ಗ್ರೇಸ್‌ ಮಾರ್ಕ್ಸ್ ನಲ್ಲಿ ಬದಲಾವಣೆ ಇಲ್ಲ: ಮಧು ಬಂಗಾರಪ್ಪ
ಮುಂದಿನ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗ್ರೇಸ್‌ ಮಾರ್ಕ್ಸ್‌ ಇರುವುದಿಲ್ಲ ಎಂದು ತಿಳಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ವರ್ಷ ಮಾತ್ರ ಮಾತ್ರ ಗ್ರೇಸ್‌ ಮಾರ್ಕ್ಸ್ ಕೊಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಕೊಟ್ಟಿರುವ ಗ್ರೇಸ್‌ ಮಾರ್ಕ್ಸ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಬಾರಿ 20 ಗ್ರೇಸ್‌ ಮಾರ್ಕ್ಸ್ ಕೊಟ್ಟರು ಫಲಿತಾಂಶ ಕಡಿಮೆಯಾಗಿತ್ತು. ಈ ವಿಚಾರ ರಾಜ್ಯದ್ಯಾಂತ ಚರ್ಚೆಯಾಗಿತ್ತು.

Tags: