Mysore
18
broken clouds

Social Media

ಶನಿವಾರ, 31 ಜನವರಿ 2026
Light
Dark

ಕರ್ನಾಟಕದಲ್ಲಿ ಡೆಂಗ್ಯೂ ಜೊತೆಗೆ ನಿಫಾ ವೈರಸ್ ಆತಂಕ

ಬೆಂಗಳೂರು : ಕರ್ನಾಟಕದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿವೆ. ರಾಜ್ಯದಲ್ಲಿ ಕಳೆದ ೨೪ ಗಂಟೆಯಲ್ಲಿ ೪೮೬ ಡೆಂಗ್ಯೂ ಕೇಸ್‌ ದಾಖಲಾಗಿದೆ. ಇದರ ಮಧ್ಯೆ ಇದೀಗ ಕರ್ನಾಟಕಕ್ಕೆ ನಿಫಾ ಕಂಟಕ ಎದುರಾಗಿದೆ. ಪಕ್ಕದ ರಾಜ್ಯ ಕೇರಳದ ಮಲಪ್ಪುರಂನಲ್ಲಿ ೧೪ ವರ್ಷದ ಬಾಲಕನಿಗೆ ನಿಫಾ ವೈರಸ್‌ ದೃಢವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಡೆಂಗ್ಯೂ ಜೊತೆಗೆ ನಿಫಾ ಆತಂಕ ಶುರುವಾಗಿದೆ.

ನಿಫಾ ವೈರಸ್‌ ಇರುವುದನ್ನ ಆರೋಗ್ಯ ಇಲಾಖೆ ದೃಢಪಡಿಸಿದೆ. ನಿಫಾ ಸೋಂಕಿತ ಬಾಲಕನಿಗೆ ಕೊಯಿಕ್ಕೋಡ್‌ ಆಸ್ಪತ್ರೆಯ ವೆಂಟಿಲೇಟರ್‌ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಮನೆಯವರು ಮಾಸ್ಕ್‌ ಧರಿಸುವಂತೆ ನಿರ್ದೇಶನ ನೀಡಲಾಗಿದೆ. ಬಾಲಕನ ಭೇಟಿಗೆ ಯಾರಿಗೂ ಅವಕಾಶ ಕೊಡದೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

ಇನ್ನು ಈ ನಿಫಾ ವೈರಸ್‌ ಬಾವಲಿ ಮತ್ತು ಹಂದಿಗಳ ದೈಹಿಕ ದ್ರವದ ಮೂಲಕ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡಿದ ಉದಾಹರಣೆ ಕೂಡ ಇದೆ. ಸದ್ಯ ಈ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ. ಹೀಗಾಗಿ ಮರಣ ಪ್ರಮಾಣ ಶೇ ೭೦ರಷ್ಟು ಇದೆ.

ಈ ನಿಫಾ ವೈರಸ್‌ ತಗುಲಿದಾಗ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ, ತಲೆನೋವು, ವಾಂತಿ ಆಗುತ್ತದೆ. ಮೆದುಳಿನ ಉರಿಯೂತ, ದೇಹದಲ್ಲಿ ಸೆಳೆತ ಉಂಟಾಗುತ್ತದೆ. ಸೋಂಕಿತ ವ್ಯಕ್ತಿ ಕೋಮಾ ಸ್ಥಿತಿಗೆ ಜಾರಿ ಮೃತಪಡಬಹುದು.

Tags:
error: Content is protected !!