Mysore
32
scattered clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡುವುದಿಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು: ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡುವುದಿಲ್ಲ. ಈಗಾಗಲೇ ಈ ತನಿಖೆಯನ್ನು ಎಸ್‌ಐಟಿ ಮಾಡುತ್ತಿದೆ. ಎನ್‌ಐಎ ತನಿಖೆ ಮಾಡೋದಾದ್ರೆ ಮಾಡಲಿ, ನಮ್ಮ ಅಭ್ಯಂತರ ಏನೂ ಇಲ್ಲ ಎಂದರು.

ಇನ್ನು ಸೌಜನ್ಯ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರ ಉದ್ದೇಶ ಏನು ಇದೆಯೋ ಗೊತ್ತಿಲ್ಲ. ಈ ಪ್ರಕರಣದ ತನಿಖೆಯಲ್ಲಿ ತಪ್ಪಿದ್ದರೆ ಇನ್ನೊಂದು ಏಜೆನ್ಸಿ ಬರುತ್ತದೆ. ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡುವುದಿಲ್ಲ. ಎನ್‌ಐಎ ತನಿಖೆ ಮಾಡೋದಿದ್ರೆ ಮಾಡಲಿ, ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಹೇಳಿದರು.

Tags:
error: Content is protected !!