ಬೆಂಗಳೂರು: ರಾಜ್ಯ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಭೆಗೆ ನೂತನ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾಮಾನ್ಯ ಸಮಿತಿಗೆ ಪತ್ರಿಕೋದ್ಯಮ ಸೇರಿದಂತೆ ಸಿನಿಮಾ ಕ್ಷೇತ್ರದ 7 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಪತ್ರಕರ್ತರಾದ ಕೊಪ್ಪಳದ ಸಾವಿತ್ರಿ ಮಜುಂದಾರ್, ಬೆಂಗಳೂರಿನ ಚಿದಾನಂದ ಪಟೇಲ್, ಶಿವಮೊಗ್ಗದ ದೇಶಾದ್ರಿ ಹೊಸ್ಮನೆ, ಸಿನಿಮಾ ಕ್ಷೇತ್ರದ ಎಸ್.ನಿಖಿತಾಸ್ವಾಮಿ, ಡಿ.ಜಿ.ವೆಂಕಟೇಶ್, ಎಸ್.ವಿಷ್ಣುಕುಮಾರ್, ಐವಾನ್ ಡಿಸಿಲ್ವ ಅವರನ್ನು ನೇಮಿಸಲಾಗಿದೆ.
ಮುಂದಿನ ಆದೇಶದವರೆಗೂ ನೂತನ ಸದಸ್ಯರು ಚಲನಚಿತ್ರ ಆಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಆದೇಶದಲ್ಲಿ ವಿವರಿಸಿದೆ.
ಈ ಹಿಂದೆ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಸಾಧು ಕೋಕಿಲ ಅವರನ್ನು ಸರ್ಕಾರ ನೇಮಿಸಿತ್ತು.





