Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನೆಪೋಟಿಸಂ ಬಗ್ಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ತೀವ್ರ ಆಕ್ರೋಶ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಅಡ್ಜೆಸ್ಟ್ ಮೆಂಟ್‌ ಮತ್ತು ನೆಪೋಟಿಸಂ ಬಗ್ಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು, ರಾಜಕೀಯ ನಾಯಕರೆಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆ. ಹಾಗಾದರೆ ಕಂಡವರ ಮಕ್ಕಳನ್ನು ಬೆಳೆಸುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಮಾತನಾಡಿದ ಪ್ರತಾಪ್‌ ಸಿಂಹ ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ ಅರಸು ಅವರು ದೇವರಾದರು. ಆದರೆ ಈಗ ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರಿಗೂ ತಮ್ಮ ಮಕ್ಕಳದ್ದೇ ಚಿಂತೆ. ಹಾಗಾದರೆ ಬೇರೆಯವರ ಮಕ್ಕಳನ್ನು ಬೆಳೆಸುವವರು ಯಾರು ಎಂದು ಮತ್ತೆ ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂಪಿ ಟಿಕೆಟ್‌ ಎಲ್ಲವನ್ನೂ ಅವರವರ ಮಕ್ಕಳಿಗೆ ಕೊಟ್ಟರು. ಇದು ಮುಂದುವರಿದರೆ ಕಂಡವರ ಮಕ್ಕಳು ಹೇಗೆ ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದರು.

ನನ್ನನ್ನೂ ತುಂಬಾ ಜನ ಬರವಣಿಗೆ ಮುಂದುವರಿಸಿ ಎಂದು ಹೇಳುತ್ತಾರೆ. ನಾನು ಮುಂದೆ ಬರೆಯಲು ಹೋದರೆ ಮೊದಲು ಬಿಜೆಪಿಯನ್ನೇ ತೊಳೆಯುತ್ತೇನೆ. ನನಗೆ ಎಲ್ಲಾ ಪಕ್ಷಗಳ ಬಗ್ಗೆಯೂ ಗೊತ್ತು ಎಂದು ಕುಟುಂಬ ರಾಜಕಾರಣದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

 

Tags: