ಬೆಳಗಾವಿ: ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ವೀರ ಸಾವರ್ಕರ್ ವಿಚಾರಕ್ಕೆ ಮತ್ತೆ ಬೆಂಕಿ ಹೊತಿಕೊಂಡಿದೆ.
ಸಾವರ್ಕರ್ ಭಾವಚಿತ್ರ ತೆರವುಗೊಳಿಸುವ ವಿಚಾರವಾಗಿ ಸರ್ಕಾರ ಹಾಗೂ ವವಿಪಕ್ಷ ನಾಯಕರ ಮಂಧ್ಯೆ ಮತ್ತೆ ಜಟಾಪಟಿ ಪ್ರಾರಂಭವಾಗಿದೆ.
ರಾಜುದಲ್ಲಿದ್ದ ಈ ಹಿಂದಿನ ಬಿಜೆಪಿ ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸರ್ಕಾರ ಸಾವರ್ಕರ್ ಭಾವಚಿತ್ರವನ್ನು ತೆರವು ಮಾಡುವಂತೆ ಒತ್ತಾಯ ಮಾಡಿದ್ದರು.
ಭಾವಚಿತ್ರ ಅಳವಡಿಸಿದ್ದಕ್ಕೆ ಕಾಂಗ್ರೆಸ್ ಮುಖಂಡರೆಲ್ಲಾ ಸುವರ್ಣಸೌಧದ ಮೆಟ್ಟಿಲ ಮುಂದೆ ಕೂತು ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಇದೀಗ ಸಾವರ್ಕರ್ ಭಾವಚಿತ್ರವನ್ನುಉ ತೆರವುಗೊಳಿಸಿ ಆ ಸ್ಥಳದಲ್ಲಿ ಮಾಜಿ ಪ್ರಧಾನಿ ನೆಹರು ಚಿತ್ರವನ್ನು ಅಳವಡಿಸುವಂತೆ ಕಾಂಗ್ರೆಸ್ ನಾಯಕರು ತಮನವಿ ಮಾಡಿದ್ದಾರೆ.
ಸ್ಪೀಕರ್ ತೀರ್ಮಾನ ಅಂತಿಮ:
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಚಾರವಾಗಿ ಕಳೆದ ಎರಡು ವರ್ಷದಿಂದ ಒತ್ತಾಯ ಮಾಡಿಕೊಂಡು ಬರಲಾಗಿದೆ. ಈಗ ಮತ್ತೆ ಈ ವಿಚಾರದ ಬಗ್ಗೆ ಚರ್ಚೆ ಶುರುವಾಗಿದ್ದು, ಸ್ಪೀಕರ್ ಯು.ಟಿ.ಖಾದರ್ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಶಾಲಾ ಪಠ್ಯಪುಸ್ತಕಗಳಿಂದ ಸಾವರ್ಕರ್ ಸೇರಿದಂತೆ ಹಲವಾರು ವಿವಾದಾತ್ಮಕ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಇದೀಗ ಸುವರ್ಣಸೌಧದಲ್ಲಿರುವ ಸಾವರ್ಕರ್ ಭಾವಚಿತ್ರವನ್ನು ಕೂಡ ತೆರವುಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.




