ಬೆಂಗಳೂರು : ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಹಾಲು ಸಂಗ್ರಹಣೆ ಪ್ರಮಾಣವು ಶೇ.15ರಷ್ಟು ಹೆಚ್ಚಳವಾಗಿದ್ದು ಈ ಹೆಚ್ಚುವರಿ ಹಾಲಿನ ಮಾರಾಟವು ಕೆಎಂಎಫ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈಗಾಗಿ ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ನಿರ್ಧಾರ ಮಾಡಿದೆ.
ಇಂದು ಬೆಳಿಗ್ಗೆಯಿಂದಲೇ ಪರಿಷ್ಕೃತ ದರ ಜಾರಿಯಾಗಿದ್ದು, 50 ಎಂ.ಎಲ್. ಹೆಚ್ಚುವರಿ ಹಾಲಿಗೆ ಗ್ರಾಹಕರು ಹೆಚ್ಚುವರಿಯಾಗಿ 2 ರೂ. ಪಾವತಿಸಬೇಕಾಗಿದೆ. ಹೆಚ್ಚುವರಿಯಾಗಿ 50 ಎಂ.ಎಲ್. ಹಾಲು ಕೊಡುವುದರಿಂದ ದಿನದಲ್ಲಿ 3.50 ಲಕ್ಷ ಲೀಟರ್ ನೇರವಾಗಿ ಮಾರಾಟವಾಗಲಿದೆ.
ಕೆಎಂಎಫ್‌ನ ನಂದಿನಿ ಬ್ರಾಂಡ್‌ನ ಎಲ್ಲಾ ಮಾದರಿಯ ಹಾಲಿನ ದರ ಪರಿಷ್ಕರಿಸಲಾಗಿದೆ. ಆದರೆ, ಮೊಸರು, ಮಜ್ಜಿಗೆ ಹಾಗೂ ಇತರೆ ಹಾಲಿನ ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.





