ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಾಮಫಲಕ ಮಹಾ ಅಭಿಯಾನ ಕೈಗೊಂಳ್ಳಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣ ರಸ್ಥೆಯಿಂದ ರ್ಯಾಲಿ ಶುರುವಾಗಲಿದ್ದು ಯಲಹಂಕ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, SP ರೋಡ್, ಬ್ರಿಗೇಡ್ ರೋಡ್, MG ರೋಡ್, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವಿನ್ಯೂ ರೋಡ್ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ರ್ಯಾಲಿ ಸಾಗಲಿದೆ.
ಕನ್ನಡದ ಅಕ್ಷರ ಶೇ.60 ರಷ್ಟು ನಾಮಫಲಕದಲ್ಲಿ ಇರಬೇಕು ಎಂದು ಕರವೇ ನಾರಾಯಣಗೌಡ ಬಣ ಮಾಲ್,ಅಂಗಡಿ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದೆ. ಒಂದು ವೇಳೆ ಕನ್ನಡ ಬಳಕೆ ಮಾಡದಿದ್ದರೆ ಇಂಗ್ಲಿಷ್ ಹಿಂದಿ ನಾಮಪಲಕಗಳನ್ನು ತೆರವು ಮಾಡಲಾಗುತ್ತದೆ.ಇಂದು ಬೃಹತ್ ಮೆರವಣಿಗೆ ನಡೆಸುತ್ತದೆ.