Mysore
28
scattered clouds

Social Media

ಬುಧವಾರ, 01 ಏಪ್ರಿಲ 2026
Light
Dark

ಮುಡಾ ಪ್ರಕರಣ: ಮಾಜಿ ಮುಡಾ ಆಯುಕ್ತ ನಟೇಶ್‌ ಮನೆ ಮೇಲೆ ಇಡಿ ದಾಳಿ

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆ 9 ಕಡೆಗಳಲ್ಲಿ ದಾಳಿ ನಡೆಸಿದ್ದು, ಮುಡಾ ಮಾಜಿ ಆಯುಕ್ತ ನಟೇಶ್‌ ಕುಮಾರ್‌ ಮನೆಯ ಮೇಲೂ ಸಹ ದಾಳಿ ನಡೆಸಿದ್ದಾರೆ.

ಮುಡಾ ಹಗರಣದ 50:50 ಅನುಪಾತದ ಬದಲಿ ನಿವೇಶನದಲ್ಲಿ ಅಕ್ರಮವಾಗಿದೆ ಎಂಬ ವಿಚಾರವಾಗಿ ನಟೇಶ್‌ ಅವರ ಮೇಲೆ ಆರೋಪ ಕೇಳಿಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.

ಈ ದೂರಿನ ಅನ್ವಯ ಮಲ್ಲೇಶ್ವರಂನ 10ನೇ ಕ್ರಾಸ್‌ನಲ್ಲಿರುವ ಮಾಜಿ ಮುಡಾ ಆಯುಕ್ತ ನಟೇಶ್‌ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಡಿ ಅಧಿಕಾರಿ ದಾಳಿ ನಡೆಸುವ ಸಂದರ್ಭದಲ್ಲಿ ನಟೇಶ್‌ ಅವರು ಖುದ್ದು ಮನೆಯಲ್ಲಿಯೇ ಇದ್ದು, ಇಡಿ ಅಧಿಕಾರಿಗಳ ದಾಳಿಯನ್ನು ಎದುರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!