Mysore
20
overcast clouds
Light
Dark

ವೇಗ ಹೆಚ್ಚಿಸಿಕೊಂಡ ಮೈಸೂರು – ಬೆಳಗಾವಿ ಎಕ್ಸ್‌ಪ್ರೆಸ್‌ ರೈಲು

ಬೆಂಗಳೂರು: ಮೈಸೂರು – ಬೆಳಗಾವಿ ನಡುವೆ ನಿತ್ಯ ಸಂಚಾರ ನಡೆಸುವ ಎಕ್ಸ್‌ಪ್ರೆಸ್‌ ರೈಲಿನ ವೇಗವನ್ನು ಹೆಚ್ಚಿಸಲಾಗಿದೆ. ಇಂದಿನಿಂದ (ಜನವರಿ 1) ಈ ರೈಲು 45 ನಿಮಿಷ ವೇಗವಾಗಿ ಚಲಿಸಿ ಬೆಳಗಾವಿ ತಲುಪಲಿದೆ.

ರೈಲು ಸಂಖ್ಯೆ 17301 ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್ ಈ ಹಿಂದೆ ಮೈಸೂರಿನಿಂದ ಬೆಳಗಾವಿಗೆ ಪ್ರಯಾಣಿಸಲು 12 ಗಂಟೆ ತೆಗೆದುಕೊಳ್ಳುತ್ತದೆ. ಸದ್ಯ 11 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮೈಸೂರಿನಿಂದ ಹಾವೇರಿವರೆಗೂ ರೈಲು ವೇಳಾಪಟ್ಟಿ ಬದಲಾವಣೆಯಾಗಿದ್ದು, ಹುಬ್ಬಳ್ಳಿ ಮತ್ತು ಧಾರವಾಡ ರೈಲು ನಿಲ್ದಾಣಗಳಲ್ಲಿ ರೈಲಿನ ಆಗಮನ/ನಿರ್ಗಮನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಮೈಸೂರು ರೈಲು ನಿಲ್ದಾಣದಿಂದ ರಾತ್ರಿ 9:30 ಕ್ಕೆ ಹೊರಟು ಮರುದಿನ ಬೆಳಿಗ್ಗೆ 8:45 ಕ್ಕೆ ಬೆಳಗಾವಿ ರೈಲು ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಮಾರ್ಗಮಧ್ಯೆ ಬೆಳಿಗ್ಗೆ 5:10 ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ. ಇನ್ನು ಮಾರ್ಗ ಮಧ್ಯ ಉಳಿದ ನಿಲ್ದಾಣಗಳಲ್ಲಿ 15 ರಿಂದ 20 ನಿಮಿಷ ಸಮಯ ವ್ಯತ್ಯಾಸವಾಗಿದೆ. ಉಳಿದಂತೆ ಬೆಳಗಾವಿ – ಮೈಸೂರು ಎಕ್ಸ್‌ಪ್ರೆಸ್‌ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಇಲ್ಲ.

ಮೈಸೂರು – ಬೆಳಗಾವಿ ಎಕ್ಸ್‌ಪ್ರೆಸ್‌ ವೇಳಾಪಟ್ಟಿ
ಮೈಸೂರು – 9.30ಕ್ಕೆ ನಿರ್ಗಮನ.
ಕೆಆರ್‌ನಗರ – 10.04
ಹೊಳೆನರಸೀಪುರ – 10.56
ಹಾನಸ – 11.30
ಅರಸೀಕೆರೆ – 12.08
ಕಡೂರು – 12.49
ಬೀರೂರು – 12.57
ಚಿಕ್ಕಜಾಜೂರು – 1.44
ದಾವಣಗೆರೆ – 2.20
ಹರಿಹರ – 2.36
ರಾಣೆಬೆನ್ನೂರು – 2.58
ಬ್ಯಾಡಗಿ – 3.19
ಹಾವೇರಿ – 3.35
ಯಲವಿಗಿ -4.05 (ಬೆಳಿಗ್ಗೆ)
ಹುಬ್ಬಳ್ಳಿ – 5.10
ಧಾರವಾಡ – 5.48
ಅಳ್ನಾವರ – 6.29
ಲೋಂಡಾ – 7.12
ಖಾನಾಪೂರ – 7.38
ಬೆಳಗಾವಿ – 8.45

136 ವರ್ಷಗಳಿಂದ ರೈಲು ಸೇವೆ: ”ಬೆಳಗಾವಿಯಲ್ಲಿ ರೈಲು ಸಂಚಾರ 1887ರಲ್ಲಿಆರಂಭಗೊಂಡಿದೆ. ಲೋಂಡಾ- ಬೆಳಗಾವಿ ಮಾರ್ಗದಲ್ಲಿ1887ರ ಮಾರ್ಚ್ 21ರಂದು ಹಾಗೂ ಬೆಳಗಾವಿ- ಮಿರಜ್‌ ಮಾರ್ಗದಲ್ಲಿಅದೇ ವರ್ಷ ಡಿ.22 ರಂದು ಮೊದಲ ರೈಲು ಸಂಚಾರ ನಡೆಸಿದೆ. ಈ ಭಾಗದಲ್ಲಿ136 ವರ್ಷಗಳಿಂದ ರೈಲು ಸೇವೆ ಇರುವುದು ವಿಶೇಷ. ದಿ.ಸುರೇಶ ಅಂಗಡಿ ಅವರು ಕೇಂದ್ರ ಸಚಿವರಾಗಿದ್ದ ವೇಳೆ ಬೆಳಗಾವಿ ರೈಲ್ವೇ ನಿಲ್ದಾಣಕ್ಕೆ 210 ಕೋಟಿ ರೂ.ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸಿದ್ದರು,” ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ