Mysore
20
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೊಲೆ ಪ್ರಕರಣ: ಇಂದೇ ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ಹಾಗೂ ಗ್ಯಾಂಗ್‌ ಶಿಫ್ಟ್?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ನಿಂದ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ದರ್ಶನ್‌ ಹಾಗೂ ಗ್ಯಾಂಗ್‌ ವಿರುದ್ಧ ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ಮೂಲಕ ದರ್ಶನ್‌, ಪವಿತ್ರಗೌಡ ಹಾಗೂ ಇತರರಿಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಹತ್ಯೆ ಕೇಸ್‌ದಲ್ಲಿ ದರ್ಶನ್‌ ಸೇರಿದಂತೆ ಇತರ ಆರೋಪಿಗಳನ್ನು ಇಂದು(ಜೂ.15) ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸೋ ಸಾಧ್ಯತೆ ಇದೆ. ಕೋರಮಂಗಲದ ನ್ಯಾಯಾಧೀಶರ ನಿವಾಸದಲ್ಲಿ ದರ್ಶನ್‌ ಭವಿಷ್ಯ ನಿರ್ಧಾರವಾಗಲಿದೆ.

ದರ್ಶನ್‌ರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಪೊಲೀಸರು ದರ್ಶನ್‌ ವಿರುದ್ಧ ಇರುವ ಸಾಕ್ಷ್ಯಾಗಳನ್ನು ತಿಳಿಸಲಿದ್ದಾರೆ. ದರ್ಶನ್‌ ಪ್ರಭಾವಿ ವ್ಯಕ್ತಿ ಇವರನ್ನು ಒಮ್ಮೊ ಜೈಲಿನಿಂದ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಪೊಲೀಸರು ನ್ಯಾಯಾಧೀಶರ ಎದುರು ಹೇಳಬಹುದು. ಆವಾಗ ನ್ಯಾಯಾಧೀಶರು ದರ್ಶನ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕೊಲೆ ನಡೆದ ಸ್ಥಳ, ಮೃತದೇಹ ಪತ್ತೆಯಾದ ಸ್ಥಳ, ಅಪಹರಣವಾದ ಸ್ಥಳದಲ್ಲಿ ಮಹಜರು ಕೆಲಸ ಪೂರ್ಣಗೊಂಡಿದೆ. ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ತಾಂತ್ರಿಕ ಸಾಕ್ಷ್ಯಗಳ ಸಂಗ್ರಹ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸಾಂಧರ್ಭಿಕ ಸಾಕ್ಷ್ಯಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹೀಗಾಗಿ ಇಂದೇ ಆರೋಪಿಗಳನ್ನು ನ್ಯಾಯಾಧೀಶ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

Tags:
error: Content is protected !!