Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಶಕ್ತಿ ದೇವತೆಗೆ ರಕ್ತಾಭಿಷೇಕ: ಮುಡಾ ಕೇಸ್‌ನ ದೂರುದಾರರಾದ ಸ್ನೇಹಮಯಿ ಕೃಷ್ಣ, ಗಂಗರಾಜು ಅವರ ಫೋಟೋಗಳಿಗೆ ಅರ್ಪಣೆ

ಮಂಗಳೂರು: ಇಲ್ಲಿನ ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು, ಅದರ ರಕ್ತವನ್ನು ಮುಡಾ ಕೇಸ್‌ನ ದೂರುದಾರರದ ಸ್ನೇಹಮಯಿ ಕೃಷ್ಣ ಹಾಗೂ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರ ಫೋಟೋಗಳಿಗೆ ಅರ್ಪಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣ ಶ್ರೀರಾಮ ಸೇನೆ ಮುಖಂಡ ಪ್ರಸಾದ್‌ ಅತ್ತಾವರ ಮೊಬೈಲ್‌ ಫೋನ್‌ನಲ್ಲಿ ವೀಡಿಯೋ ಚಿತ್ರೀಕರಣವಾಗಿದೆ ಎಂದು ತಿಳಿದು ಬಂದಿದೆ.

ಕಳೆದ ದಿನಗಳ ಹಿಂದೆಷ್ಟೆ ಮಸಾಜ್‌ ಪಾರ್ಲರ್‌ ಒಂದಕ್ಕೆ ಅಕ್ರಮವಾಗಿ ನುಗಿ ಗಲಾಟೆ ನಡೆಸಿದ್ದ ಆರೋಪದ ಮೇಲೆ ಪ್ರಸಾದ್‌ ಅತ್ತಾವರ್‌ ಬಂಧನವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಬಂಧಿತ ಆರೋಪಿಯ ಮೊಬೈಲ್‌ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆದಿದ್ದಾರೆ. ಆ ವೇಳೆ ಶಕ್ತಿ ದೇವತೆಗೆ ಪ್ರಾಣಿ ಬಲಿ ನೀಡಿ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರ ಫೋಟೋಗಳನ್ನಿಟ್ಟು ರಕ್ತಾಭಿಷೇಕ ಮಾಡಿರುವ ಸ್ಫೋಟಕ ಅಂಸ ಬೆಳಕಿಗೆ ಬಂದಿದೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಈ ಇಬ್ಬರ ಫೋಟೋಗಳಿಗೆ ರಕ್ತಾಭಿಷೇಕ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮಡದಿಗೆ ಮಂಜೂರಾಗಿರುವ ಮುಡಾ ನಿವೇಶನಗಳ ವಿರುದ್ಧದ ಹೋರಾಟದಲ್ಲಿ ಈ ಇಬ್ಬರಿಗೂ ಬಲ ತುಂಬುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

Tags: