Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಲೇಖಕ ಎಸ್‌.ಉಮೇಶ್‌ ರಚಿಸಿರುವ ʼಅಯೋಧ್ಯಾʼ ಕೃತಿ ಬಿಡುಗಡೆ ಮಾಡಿದ ಸಂಸದ ಪ್ರತಾಪ್‌ ಸಿಂಹ!

ಮೈಸೂರು : ಬಹುಸಂಖ್ಯಾತ ಹಿಂದುಗಳ ಬಹು ವರ್ಷಗಳ ಕನಸಾಗಿದ್ದ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಧಾತ್ರಿ ಪ್ರಕಾಶನ ಪ್ರಕಟಿಸಿರುವ, ಲೇಖಕ ಎಸ್‌.ಉಮೇಶ್‌ ಬರೆದಿರುವ ‌ʼಅಯೋಧ್ಯಾʼ  ಕೃತಿಯನ್ನು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಬಿಡುಗಡೆ ಮಾಡಿದ್ದಾರೆ.

ನಗರದ ಜಲದರ್ಶಿನಿಯಲ್ಲಿರುವ ಸಂಸದರ ಕಚೇರಿಯಲ್ಲಿ ಲೇಖಕ ಎಸ್‌.ಉಮೇಶ್‌, ಪತ್ರಕರ್ತ ರವೀಂದ್ರ ಜೋಶಿ ಅವರ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ ಅವರು, ಅಯೋಧ್ಯೆ ಕುರಿತಾಗಿ ಈ ಸಂದರ್ಭದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿರುವುದು ಶ್ಲಾಘನೀಯ ಎಂದರು.

ಅಯೋಧ್ಯೆ ಕುರಿತಾದ ಇತಿಹಾಸದ ಪುಟಗಳನ್ನ ತೆರೆದಿಡುವಂತಹ ಸುಸಂದರ್ಭದಲ್ಲಿ ನೀವು ಪುಸ್ತಕವನ್ನು ಬಿಡುಗಡೆ ಮಾಡಿದ್ದೀರಿ ಎಂದು ಹೇಳಿದಲ್ಲದೆ ಈ ಪುಸ್ತಕವನ್ನು ಕನ್ನಡ ಓದುಗರು ಓದಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಆಂದೋಲನ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಲೇಖಕ ಉಮೇಶ್‌, ಈ ಪುಸ್ತಕಕ್ಕಾಗಿ ಸತತ ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದೇನೆ. ಅಯೋಧ್ಯಾ ಇತಿಹಾಸದ ಬಗ್ಗೆ ಪುಸ್ತಕ ಬರೆಯುವ ಆಲೋಚನೆ ಬಂದ ಮೊದಲಿಗೆ, ಉಡುಪಿಯ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಈ ಬಗ್ಗೆ ತಿಳಿಸಿದೆ. ಕೂಡಲೇ ಅಯೋಧ್ಯಾ ಇತಿಹಾಸಕ್ಕೆ ಸಂಬಂಧಿಸಿದಂತೆ ಅನೇಕ ಮಹನೀಯರ ಸಂಪರ್ಕವನ್ನು ಕಲ್ಪಿಸಿಕೊಟ್ಟರು ಎಂದು ತಿಳಿಸಿದರು.

ಹಿಂದೆ ನಡೆದದ್ದು ಯುವ ಜನತೆಗೆ ತಿಳಿಯಬೇಕು!: ಇಂದಿನ ಯುವಜನತೆಗೆ ೧೯೯೨ರಿಂದ ಈಚೆಗೆ ರಾಮ ಮಂದಿರ ಅಥವ ಅಯೋಧ್ಯೆಗೆ ಸಂಬಂಧಿಸಿದ ಮಾಹಿತಿಗಳ ಬಗ್ಗೆ ತಿಳಿದಿರುತ್ತದೆ. ಆದರೇ ಅದಕ್ಕೂ ಹಿಂದೆ ಸುಮಾರು ೫೦೦ವರ್ಷಗಳ ಕಾಲ ಆಯೋಧ್ಯೆಯ ಸುತ್ತ ನಡೆದ ಅನೇಕ ರೋಚಕ ಘಟನಾವಳಿಗಳು ಹಾಗೂ ಬೆಳವಣಿಗೆಗಳ ಬಗ್ಗೆ ಅಷ್ಟಾಗಿ ತಿಳಿದಿರಲಿಕ್ಕಿಲ್ಲ. ಹೀಗಾಗಿ, ಆ ಸಂದರ್ಭದಲ್ಲಿ ನಡೆದ ಹೋರಾಟದ ಬಗ್ಗೆ ಈ ಪುಸ್ತಕದಲ್ಲಿ ದಾಖಲಿಸಿದ್ದೇನೆ ಎಂದರು.

ನಾಳೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಂದ ʼಅಯೋಧ್ಯೆʼ ಪುಸ್ತಕವನ್ನು ಬಿಡುಗಡೆ ಮಾಡಿಸಲಾಗುವುದು ಎಂದು ಉಮೇಶ್‌ ತಿಳಿಸಿದರು.

ಲೇಖನದ ಮೂಲಕ ರಾಮನ ಸೇವೆ: ರಾಮ ಮಂದಿರ ಉದ್ಘಾಟನೆಗೆ ಪ್ರಪಂಚದಾದ್ಯಂತ ರಾಮ ಭಕ್ತು ಕಾತುರದಿಂದ ಕಾಯುತ್ತಿದ್ದಾರೆ. ದೇಶ-ವಿದೇಶಗಳಿಂದ ರಾಮ ಭಕ್ತರು ಎತಾಶಕ್ತಿ ಸೇವೆ ಮಾಡುತ್ತಿದ್ದಾರೆ. ಈ ಮಧ್ಯೆ ಧಾತ್ರಿ ಪ್ರಕಾಶನದಿಂದ ಸಾಹಿತ್ಯದ ಮೂಲಕ ರಾಮನಿಗೆ ಸೇವೆ ಸಲ್ಲಿಸುತ್ತಿದೆ. ಅಷೇ ಅಲ್ಲದೆ, ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ʼಅಯೋಧ್ಯಾʼ ಪುಸ್ತಕವನ್ನು ಬಿಡುಗಡೆ ಮಾಡುವ ಉದ್ದೇಶ ಪ್ರಕಾಶನ ಹೊಂದಿದೆ ಎಂದು ಲೇಖಕ ಉಮೇಶ್‌ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ