Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಹುತಾತ್ಮ ಯೋಧ ಅನುಪ್ ಗೆ ಅಂತಿಮ ನಮನ ಸಲ್ಲಿಸಿದ‌ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೇಶ್‌ ಚೌಟ್

ಉಡುಪಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ನಗರದಲ್ಲಿ ರಸ್ತೆ ಅಪಘಾತದಲ್ಲಿ ಹುತಾತ್ಮನಾದ ರಾಜ್ಯದ ಕುಂದಾಪುರ ತಾಲ್ಲೂಕಿನ ಬೀಜಾಡಿಯ ಯೋಧ ಅನೂಪ್‌ ಪಾರ್ಥೀವ ಶರೀರಕ್ಕೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಅಂತಿಮ ನಮನ ಸಲ್ಲಿಸಿದರು.

ದಕ್ಷಿಣ ಕನ್ನಡ ಸಂಸದ ಬಿಜೇಶ್‌ ಚೌಟ ಹಾಗೂ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹುತಾತ್ಮ ಯೋಧ ಅನೂಪ್‌ ಅವರ ಪಾರ್ಥೀವ ಶರೀರ ಉಡುಪಿಗೆ ಆಗಮಿಸುತ್ತಿದ್ದಂತೆ ಸೇನಾಧಿಕಾರಿಗಳಿಂದ ಹಸ್ತಾಂತರ ಮಾಡಿಕೊಂಡು ಅಂತಿಮ ನಮನ ಸಲ್ಲಿಸಿದರು.

ಇಂದು (ಗುರುವಾರ) ಕುಂದಾಪುರ ತಾಲ್ಲೂಕಿನ ಬೀಜಾಡಿಪಡು ಸರ್ಕಾರಿ ಶಾಲಾ ಮೈದಾನದಲ್ಲಿ ಅನೂಪ್‌ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಿಡಲು ತಯಾರಿ ನಡೆಸಿದ್ದು, ಸಂಜೆ ವೇಳೆಗೆ ಸಕಲ ಸೇನೆ ಮತ್ತು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ಅನೂಪ್‌ ಭಾರತಾಂಬೆಯ ಸೇವೆ ಮಾಡಬೇಕೆಂದು ಹಠದಿಂದ ಸೇನೆ ಸೇರಿ 13 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ವಿವಾಹವಾದ ಅನೂಪ್‌ಗೆ 2 ವರ್ಷದ ಪುಟ್ಟ ಮಗುವಿದೆ. ಜೊತೆಗೆ ಇಬ್ಬರು ಸಹೋದರಿಯರು, ಬಂಧು ಮಿತ್ರರು, ಗ್ರಾಮಸ್ಥರು ಹಾಗೂ ಗೆಳೆಯರನ್ನು ಬಿಟ್ಟು ಆಗಲಿದ್ದಾರೆ.

Tags:
error: Content is protected !!