ಬೆಂಗಳೂರು: ಮಕ್ಕಳಲ್ಲಿಯೂ ಹೆಚ್ಚು ಕ್ಯಾನ್ಸರ್ ಆಗುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಚಿವ ಶರಣು ಪ್ರಕಾಶ್ ಪಾಟೀಲ್ ಅಂಕಿ-ಅಂಶಗಳ ಸಮೇತ ಉತ್ತರಿಸಿದ್ದಾರೆ.
ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರು ಕೇಳಿದ ಪ್ರಶ್ನೆಗೆ ಸಚಿವ ಶರಣು ಪ್ರಕಾಶ್ ಪಾಟೀಲ್ ಉತ್ತರಿಸಿದರು.
ಪ್ರತಿ ವರ್ಷ ರಾಜ್ಯದಲ್ಲಿ 14 ವರ್ಷದೊಳಗಿನ ಮಕ್ಕಳಲ್ಲಿ 1533 ಪ್ರಕರಣಗಳು ಕಂಡುಬರುತ್ತಿವೆ. ಗಂಡು ಮಕ್ಕಳಲ್ಲಿ 876 ಕೇಸ್ ಮತ್ತು ಹೆಣ್ಣುಮಕ್ಕಳಲ್ಲಿ 657 ದಾಖಲಾಗುತ್ತಿದೆ. ಗಂಡು ಮಕ್ಕಳಲ್ಲಿ 45% ರಕ್ತ ಕ್ಯಾನ್ಸರ್, 14.5% ಲಿಂಪೋಮಾ ಕ್ಯಾನ್ಸರ್, 12.9% ಮೆದುಳು, 5.6% ಮೂಳೆ ಸಂಬಂಧಿಸಿದ ಕ್ಯಾನ್ಸರ್, 3.6% ಮೂತ್ರಪಿಂಡ ಕ್ಯಾನ್ಸರ್, 2.6% ಕಣ್ಣಿನ ಕ್ಯಾನ್ಸರ್ ಬರುತ್ತಿದೆ.
ಹೆಣ್ಣುಮಕ್ಕಳಲ್ಲಿ 44.6% ರಕ್ತ ಕ್ಯಾನ್ಸರ್, 12.1% ಮೆದುಳು ಕ್ಯನ್ಸರ್, 9.5% ದುಗ್ದ ಗ್ರಂಥಿ, 5.8% ಮೂಳೆ ಕ್ಯಾನ್ಸರ್ ಹಾಗೂ 3.4% ಮೃದು ಅಂಗಾಂಗ ಕ್ಯಾನ್ಸರ್ ಪತೆತಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದು, ABRKಯಲ್ಲಿ ಚಿಕಿತ್ಸೆಗೆ ಹಣ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನೂ ಮೈಸೂರು, ಕಲಬುರಗಿ, ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಕ್ಯಾನ್ಸರ್ ಬಗ್ಗೆ ಜಿಲ್ಲೆ, ತಾಲೂಕು ಮಟ್ಟದ ಜಾಗೃತಿ ಮೂಡಿಸಲು ಕ್ರಮವಹಿಸುತ್ತೇವೆ ಎಂದು ತಿಳಿಸಿದರು.





