Mysore
26
broken clouds

Social Media

ಭಾನುವಾರ, 25 ಜನವರಿ 2026
Light
Dark

ಅಕ್ರಮ ಹಣ ವರ್ಗಾವಣೆ | ಶಾಸಕ ವೀರೇಂದ್ರ ಪಪ್ಪಿ 4 ದಿನ ಇ.ಡಿ ಕಸ್ಟಡಿಗೆ

kc veerendra pappy

ಬೆಂಗಳೂರು : ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರನ್ನು 35ನೇ ಸಿಸಿಹೆಚ್ ನ್ಯಾಯಾಲಯ 4 ದಿನ ಇಡಿ ಕಸ್ಟಡಿಗೆ ಒಪ್ಪಿಸಿದೆ.

ಜನಪ್ರತಿನಿಧಿಗಳ ನ್ಯಾಯಾಧೀಶರು ರಜೆಯಲ್ಲಿದ್ದ ಹಿನ್ನೆಲೆ 35ನೇ ಸಿಸಿಹೆಚ್ ಜಡ್ಜ್ ಮುಂದೆ ಇಡಿ ಹಾಜರುಪಡಿಸಿತ್ತು. ಶನಿವಾರ ವೀರೇಂದ್ರ ಪಪ್ಪಿ ಸಿಕ್ಕಿಂನ ಗ್ಯಾಂಗ್ಟಕ್‍ನಲ್ಲಿ ಬಂಧಿಸಲಾಗಿತ್ತು. ಶನಿವಾರ ರಾತ್ರಿಯೇ ಸಿಕ್ಕಿಂನಿಂದ ಬೆಂಗಳೂರಿಗೆ ಕರೆತಂದಿದ್ದ ಇಡಿ ಇವತ್ತು ಬೆಳಗ್ಗೆ ಬೌರಿಂಗ್ ಹಾಸ್ಪಿಟಲ್‍ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಶಾಂತಿನಗರ ಇಡಿ ಕಚೇರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು.

ದಾಳಿ ವೇಳೆ ಶಾಸಕ ಪಪ್ಪಿ ಮನೆಯಲ್ಲಿ 12 ಕೋಟಿ ರೂ. ನಗದು, 1 ಕೋಟಿ ರೂ. ವಿದೇಶಿ ಹಣ, 6 ಕೋಟಿ ರೂ. ಮೌಲ್ಯದ ಚಿನ್ನ, 10 ಕೆಜಿ ಬೆಳ್ಳಿ, ಐಷಾರಾಮಿ ಕಾರು, 17 ಬ್ಯಾಂಕ್ ಖಾತೆ ಹಾಗೂ 2 ಬ್ಯಾಂಕ್ ಲಾಕರ್‌ಗಳನ್ನು ಇಡಿ ಸೀಜ್ ಮಾಡಿತ್ತು. ಇಡಿ 14 ದಿನ ತಮ್ಮ ಕಸ್ಟಡಿಗೆ ನೀಡಿ ಅಂತ ರಿಮ್ಯಾಂಡ್‍ನಲ್ಲಿ ಮನವಿ ಮಾಡಿತ್ತು. ಇದೇ ವೇಳೆ ವಿರೇಂದ್ರ ಪಪ್ಪಿ ಸಹೋದರ ಕೆ.ಸಿ. ನಾಗರಾಜ್ ಹಾಗೂ ಬೆಂಬಲಿಗರು ಇಡಿ ಕಚೇರಿ ಮುಂದೆ ಜಮಾಯಿಸಿದ್ದರು.

ವೀರೇಂದ್ರ ಪಪ್ಪಿ ಸಹೋದರ ಕೆಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ 3 ವ್ಯವಹಾರ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಘಟಕಗಳು ಕೆಸಿ ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಇ.ಡಿ ತಿಳಿಸಿದೆ.

Tags:
error: Content is protected !!