Mysore
25
broken clouds

Social Media

ಸೋಮವಾರ, 26 ಜನವರಿ 2026
Light
Dark

ಫಲ್ಗುಣಿ ನದಿಯಲ್ಲಿ ಮೊಯಿದ್ದೀನ್‌ ಬಾವ ಸಹೋದರನ ಶವ ಪತ್ತೆ

ಮಂಗಳೂರು: ಕಾಂಗ್ರೆಸ್ ಮಾಜಿ ಶಾಸಕ ಮೊಯಿದ್ದೀನ್‌ ಬಾವ ಅವರ ಸಹೋದರ ಮುಮ್ತಾಜ್‌ ಅಲಿ ಅವರ ಶವ ಪತ್ತೆಯಾಗಿದೆ.

ಕೂಳೂರಿನ ಸೇತುವೆ ಸಮೀಪವೇ ಇರುವ ಮತ್ತೊಂದು ಸೇತುವೆ ಬಳಿ ವ್ಯಕ್ತಿಯೊಬ್ಬರ ತಲೆ ಕಾಣಿಸುತ್ತಿತ್ತು. ಸಮೀಪಕ್ಕೆ ತೆರಳಿದ ಈಜುಗಾರರು ಇದು ಮುಮ್ತಾಜ್‌ ಅಲಿ ಅವರ ದೇಹ ಎಂದು ಖಚಿತಪಡಿಸಿದ್ದಾರೆ.

ಫಲ್ಗುಣಿ ನದಿಯಿಂದ ಶವವನ್ನು ಮೇಲಕ್ಕೆ ಎತ್ತಲಾಗಿದ್ದು, ಮುಮ್ತಾಜ್‌ ಅಲಿ ಅವರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಮುಮ್ತಾಜ್‌ ಅಲಿ ಅವರು, ನಿನ್ನೆ ಬೆಳಗಿನ ಜಾವ ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಹೋಗಿದ್ದರು. ಈ ವೇಳೆ ಕೂಳೂರು ಹೈವೇಯಲ್ಲಿ ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದ್ದರು.

ಈ ಹಿನ್ನೆಲೆಯಲ್ಲಿ ಸೇತುವೆ ಬಳಿಯೇ ಕಾರು ನಿಲ್ಲಿಸಿದ್ದ ಪರಿಣಾಮ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು. ಇಂದು ಮುಮ್ತಾಜ್‌ ಅಲಿ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ.

 

Tags:
error: Content is protected !!