Mysore
20
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ದರ್ಶನ್ ಖೈದಿ ನಂಬರ್ ನಲ್ಲಿಯೇ ಬಂತು ಮೊಬೈಲ್ ಕವರ್

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಅರೆಸ್ಟ್‌ ಆಗಿ ಪರಪ್ಪನ ಅಗ್ರಹಾರದ ಜೈಲು ಸೇರಿದ್ದರು ಕೂಡ ಅವರ ಅಭಿಮಾನಿಗಳು ಮಾತ್ರ ದರ್ಶನ್ ಗೆ ಸಪೋರ್ಟ್‌ ಮಾಡುತ್ತಲೇ ಇದ್ದಾರೆ.  ಒಂದು ಕಡೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು ದರ್ಶನ್‌ ವಿರುದ್ಧ ಒಂದಲ್ಲ ಒಂದು ಸಾಕ್ಷ್ಯಗಳನ್ನಕಲೆ ಹಾಕುತ್ತಲೆ ಇದ್ದಾರೆ. ಮತ್ತೊಂದು ಕಡೆ ದರ್ಶನ್‌ ನೋಡಬೇಕು ಅಂತಾ ಪ್ರತಿದಿನ ಜೈಲಿನ ಬಳಿ ಬಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಎಲ್ಲದರ ನಡುವೆ ಇದೀಗ ಮತ್ತೊಂದು ಟ್ರೆಂಡ್‌ ಶುರುವಾಗುತ್ತಿದೆ. ದರ್ಶನ್‌ ಖೈದಿ ನಂಬರ್‌ 6106 ಅನ್ನು ಅಭಿಮಾನಿಗಳು ಮೊಬೈಲ್ ಕವರ್ ಆಗಿ ಮಾಡಿಕೊಳ್ಳುತ್ತಿದ್ದಾರೆ. ಬೈಕ್‌ ಮೇಲೆ , ಕಾರುಗಳ ಮೇಲೆ, ಆಟೋಗಳ ಮೇಲೆ  ಖೈದಿ ಸಂಖ್ಯೆಯನ್ನ ಬರೆಸಿಕೊಳ್ಳುತ್ತಿದ್ದ ನೂರಾರು ಅಭಿಮಾನಿಗಳು ಇದೀಗ ಮೊಬೈಲ್ ಕವರ್ ಗೂ ʻಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಖೈದಿ ಸಂಖ್ಯೆʼ ಹಾಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಬಿಡುತ್ತಿದ್ದಾರೆ. ಸದ್ಯ ಈ ಫೋಟೋಗಳು ವೈರಲ್‌ ಆಗುತ್ತಿದ್ದು,  ಖೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಶುರು ಆಗಿದೆ.

Tags: