Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ಕೆಂಡಾಮಂಡಲ

ಚಿಕ್ಕಮಗಳೂರು: ಆರ್‌ಆರ್‌ಎಸ್‌ ಹಾಗೂ ಬಿಜೆಪಿ ಪಕ್ಷವನ್ನು ವಿಷದ ಹಾವಿಗೆ ಹೋಲಿಕೆ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಹುಚ್ಚು ನಾಯಿ ಕಡಿದಂತೆ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳು ಅವರ ಹಿರಿತನಕ್ಕೆ ಗೌರವ ತರುವ ಮಾತುಗಳಲ್ಲ. ಈ ಹೇಳಿಕೆಗಳನ್ನು ಅವರೇ ಮಾತನಾಡಿದ್ದಾರೋ ಅಥವಾ ಅವರಿಂದ ಯಾರೋ ಹೇಳಿಸಿದ್ದಾರೋ ಗೊತ್ತಿಲ್ಲ. ಬಹುಶಃ ಅವರಿಂದ ರಾಹುಲ್‌ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರೇ ಆ ಮಾತುಗಳನ್ನು ಹೇಳಿಸಿದ್ದಾರೆ ಎಂದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಅವರ ಹೊಡಿ, ಬಡಿ, ಕೊಲ್ಲುವುದು ಎಂಬ ಮಾತುಗಳು ತಾಲಿಬಾನಿಗಳ ಹೇಳಿಕೆಗಳಂತೆ ಅನ್ನಿಸುತ್ತಿದೆ. ಈ ಹೇಳಿಕೆಗಳು ಸಂವಿಧಾನದ ಮೇಲೆ ನಂಬಿಕೆ ಇಟ್ಟವರ ಹೇಳಿಕೆಗಳಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.

Tags: