Mysore
27
few clouds

Social Media

ಬುಧವಾರ, 21 ಜನವರಿ 2026
Light
Dark

ಕಾಂಗ್ರೆಸ್‌ ನಾಯಕರಿಗೆ ತೋರಿದ ಅಗೌರವವನ್ನು ಖರ್ಗೆ ಮರೆತಿದ್ದಾರೆ: ಶಾಸಕ ಯತ್ನಾಳ್‌ ಕಿಡಿ

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕರಿಗೆ ತೋರಿದ ಅಗೌರವವನ್ನು ಖರ್ಗೆ ಮರೆತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕಾಗಿ ಜಾಗವನ್ನು ಮಂಜೂರು ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾಯರು ಅಗಲಿದಾಗ ಅವರಿಗೆ ಕಾಂಗ್ರೆಸ್ ಪಕ್ಷ ಸ್ಮಾರಕ ನೀಡಲೇ ಇಲ್ಲ. 2004-14 ರಿಂದ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು ಆದರೆ ಭಾರತವನ್ನು ದಕ್ಷವಾಗಿ ಮುನ್ನಡೆಸಿದ್ದ ಪಿ.ವಿ.ಎನ್ ಅವರಿಗೆ ಸ್ಮಾರಕವನ್ನು ಕಾಂಗ್ರೆಸ್ ಮಾಡಲಿಲ್ಲ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದಾಗಲೇ ಪಿ.ವಿ.ನರಸಿಂಹ ರಾಯರಿಗೆ ಸ್ಮಾರಕ ನಿರ್ಮಾಣ ಮಾಡಲು ಮೋದಿ ಸರ್ಕಾರ ಜಾಗ ನೀಡುವದರೊಂದಿಗೆ ನರಸಿಂಹ ರಾಯರಿಗೆ ಮರಣೋತ್ತರ ಭಾರತ ರತ್ನ ಘೋಷಿಸಿತು ಎಂದು ಹೇಳಿದ್ದಾರೆ.

ನರಸಿಂಹ ರಾಯರ ಪಾರ್ಥಿವ ಶರೀರವನ್ನು AICC ಪ್ರಧಾನ ಕಚೇರಿಯಲ್ಲಿ ಇಡಲೂ ಒಪ್ಪಿಗೆ ನೀಡಿರಲಿಲ್ಲ. ರಾಯರಿಗೆ ಕಾಂಗ್ರೆಸ್ ಪಕ್ಷ ಎಷ್ಟರ ಮಟ್ಟಿಗೆ ಅಗೌರವ ತೋರಿತೆಂದರೆ ಅವರ ಅಂತಿಮ ಸಂಸ್ಕಾರವನ್ನು ನವ ದೆಹಲಿಯಲ್ಲಿ ಮಾಡದೆ ಹೈದರಾಬಾದ್‌ನಲ್ಲಿ ಏರ್ಪಾಡು ಮಾಡಿಕೊಳ್ಳುವಂತೆ ಅವರ ಕುಟುಂಬಕ್ಕೆ ಸೂಚಿಸಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು, ಸ್ವತಃ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾದ ಸಂಜಯ್ ಬರು ಅವರು ತಮ್ಮ ‘The Accidental Prime Minister’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪಕ್ಷಕ್ಕೆ, ದೇಶಕ್ಕೆ ಮರೆಯಲಾಗದಂತ ಕೊಡುಗೆ ನೀಡಿದ ನರಸಿಂಹ ರಾಯರಿಗೆ ಕಾಂಗ್ರೆಸ್ ಕೊಟ್ಟ ಗೌರವ ಇದು. ಪ್ರಣಬ್ ಮುಖರ್ಜಿ ಅವರಿಗೆ, ಪಿ.ವಿ.ನರಸಿಂಹ ರಾಯರಿಗೆ ತೋರಿದ ಅಗೌರವವನ್ನು, ಅವಮಾನವನ್ನು ಖರ್ಗೆ ಅವರು ಬಹುಷಃ ಮರೆತಿದ್ದಾರೆ ತಿರುಗೇಟು ನೀಡಿದ್ದಾರೆ.

Tags:
error: Content is protected !!