ಹುಬ್ಬಳ್ಳಿ: ಶಾಸಕ ಸ್ಥಾನಕ್ಕೆ ನೀನು ರಾಜೀನಾಮೆ ಕೊಡು. ನಾನು ರಾಜೀನಾಮೆ ಕೊಡ್ತೀನಿ. ಇಬ್ಬರು ಚುನಾವಣೆಗೆ ಹೋಗೋಣ. ಯಾರು ಗೆಲ್ಲುತ್ತಾರೋ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಶಾಸಕ ಯತ್ನಾಳ್ ಓಪನ್ ಚಾಲೆಂಜ್ ಹಾಕಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಾನು ಕೇವಲ ಭಗವಾ ಧ್ವಜದ ಮೇಲೆ ಗೆಲ್ಲುತ್ತೇನೆ. ನನಗೆ ಮುಸ್ಲಿಂಮರ ವೋಟ್ ಬೇಡ. ವಿಜಯೇಂದ್ರ ನಿನಗೆ ತಾಕತ್ ಇದೆಯಾ? ಎಂದು ಸವಾಲು ಹಾಕಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿ ಪಕ್ಷವು ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಆದ ಮೇಲೆ ನಾನು ಮತ್ತೆ ಹೋಗುತ್ತೇನೆ. ವಿಜಯೇಂದ್ರ ನಿನಗೆ ಧಮ್ ಇದ್ದರೆ ನೇರವಾಗಿ ಮಾತನಾಡು. ಹಂದಿಗಳ ಕೈಯಲ್ಲಿ ಮಾತನಾಡಿಸಬೇಡ ಎಂದು ಬಿವೈವಿ ಬೆಂಬಲಿಗರ ವಿರುದ್ಧ ಕಿಡಿಕಾರಿದರು.





