ಬೆಂಗಳೂರು: ಬಿಜೆಪಿ ನಾಯಕರು, ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಪೋಸ್ಟರ್ ಅಭಿಯಾನದ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದೀಗ ಪೋಸ್ಟರ್ ಅಭಿಯಾನಕ್ಕೆ ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಇಂದು(ಡಿಸೆಂಬರ್.31) ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರು ಯಾವ ಅಭಿಯಾನವನ್ನಾದರೂ ಮಾಡಿಕೊಳ್ಳಲಿ ಅಥವಾ ಬಟ್ಟೆಯನ್ನಾದರೂ ಹರಿದುಕೊಳ್ಳಲಿ. ಮೊದಲು ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕು. ಲಾಜಿಕ್ ಇದ್ದರೆ ನಾವು ಉತ್ತರ ಕೊಡಬಹುದು. ಆದರೆ ಪೋಸ್ಟರ್ ಅಭಿಯಾನ ಮಾಡುತ್ತಿರುವುದರಲ್ಲಿ ಲಾಜಿಕ್ ಇಲ್ಲ. ನಮ್ಮ ಸಿದ್ಧಾಂತವೇ ಬೇರೆ, ಅವರ ಸಿದ್ಧಾಂತವೇ ಬೇರೆ. ನಾವು ಮೊದಲಿನಿಂದಲೂ ಬಿಜೆಪಿ ಸಿದ್ಧಾಂತದ ವಿರುದ್ಧವೇ ಇದ್ದೇವೆ. ಅದಕ್ಕೆ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಸ್ ಏನಾಯ್ತು?, ಅಶೋಕ್ ಕೇಸ್ ಏನಾಯ್ತು? ಅವರ ಕೇಸ್ ವಿಚಾರ ಮಾಧ್ಯಮದಲ್ಲೇ ಮಾಧ್ಯಮದಲ್ಲೇ ಪ್ರಸಾರವಾಯಿತು. ಬಿಜೆಪಿಯವರು ಕಲಬುರ್ಗಿಗೆ ಬರಲು ಎಳನೀರು, ಟೀ ಹಾಗೂ ಕಾಫಿ ಕೊಡುತ್ತೇವೆ. ಗುತ್ತಿಗೆದಾರ ಸಚಿನ್ ಕುಟುಂಬ ನ್ಯಾಯ ಒದಗಿಸಬೇಲಕು ಎಂದು ಹೇಳಿದೆ. ಹೀಗಾಗಿ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.



