ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಚಾರ, ಕಮಿಷನ್‌ದಂಧೆಗಳು ಹೆಚ್ಚಾಗಿವೆ ಎಂಬ ಗುತ್ತಿಗೆದಾರರ ಸಂಘದ ಆರೋಪಕ್ಕೆ ಸಚಿವ ಎನ್‌ಎಸ್ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನನ್ನ ಇಲಾಖೆಯಲ್ಲಿ ಕಮಿಷನ್ ಆರೋಪ ಸಾಬೀತಾದರೆ, ಅದೇ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ. ಗುತ್ತಿಗೆದಾರರು ಸುಮ್ಮನೇ ಆರೋಪ ಮಾಡಬಾರದು. ಸ್ಪಷ್ಟವಾಗಿ ತಿಳಿದು ಆರೋಪ ಮಾಡಿ ಎಂದರು.
ಬೇರೆ ಇಲಾಖೆಯವರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಇಲಾಖೆಯಲ್ಲಿ ಶೇ 100ರಷ್ಟು ಪಾರದರ್ಶಕತೆ ಇದೆ. ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಚಾರವಿಲ್ಲ. ಅಧಿಕಾರಿಗಳು ತಪ್ಪು ಮಾಡಿದಾಗ ನಾನು ಸಹಿಸಲ್ಲ ಎಂದು ತಿಳಿಸಿದರು.





