Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಿದ್ದರಾಮಯ್ಯ ಪತ್ನಿಗೆ ಬಂದಿರೋ ಜಮೀನು ಸರ್ಕಾರಿ ಭೂಮಿ ; ಸಿಎಂ ವಿರುದ್ಧ ಎಚ್.ಡಿ.ಕೆ ಗುಡುಗು

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಸಂಬಂಧ ಮುಡಾ ನಿವೇಶನಗಳ ಹಂಚಿಕೆ ಕುರಿತ ನೀಲನಕ್ಷೆಯನ್ನ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

ನಗರದ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್‌ ಡಿ ಕುಮಾರಸ್ವಾಮಿ,  ಮುಡಾ ಹಗರಣ ಬಂದ್ರೆ ದೇವರೇ ಕಾಪಾಡಬೇಕು. ೬೨ ಕೋಟಿ ಕೊಡಬೇಕು ಅಂತ ಅಯ್ಯೂ ನನ್ನ ಜಮೀನು ಅಂತಾರೆ. ಇದು ಪಿತ್ರಾರ್ಜಿತ ಆಸ್ತಿನಾ..? ಎಲ್ಲ ದಾಖಲೆ ಇಟ್ಟುಕೊಂಡಿದ್ದೀನಿ. ಅವರ ಪತ್ನಿ ಪಾರ್ವತಿ ಖರೀದಿ ಮಾಡಿದ್ದು ಅಂತ ಪ್ಲಾನ್‌  ಸ್ಯಾಕ್ಷನ್‌ ಆಗಿರೋದು..? ಇವರು ಭೂಮಿ ಖರೀದಿ ಮಾಡಿದ್ದು ಯಾವಾಗ..? ಮುಡಾದವರು ಪಾರ್ಕ್‌, ಸೈಟ್‌ , ಹಂಚಿಕೆ ಮಾಡಿದ ಮೇಲೆ ಖರೀದಿ ಮಾಡಿದ್ದಾರೆ.

೧೯೯೨ ರಲ್ಲಿ ಮುಡಾ ಅಧಿಸೂಚನೆ ೧೯೯೭ ರಲ್ಲಿ ಅಂತಿಮ ನೋಟಿಫಿಕೇಷನ್‌ ಆಯ್ತು. ನಿಂಗ@ ಜವರಾಗೆ ಅಕೌಂಟ್‌ ಹಣ ಹಾಕದೆ, ೩ ಎಕರೆ ೧೬ ಗುಂಟೆಗೆ ಹಣ ಕೋರ್ಟ್‌ ನಲ್ಲಿ ಕಟ್ಟಿದ್ದಾರೆ. ನೀವು ಈ ಅಗೌರವಾನ್ವಿತ ಉಪಮುಖ್ಯಮಂತ್ರಿಗಳು. ಜವರಾ ಯಾವಾಗ ಸತ್ತ ಸ್ವಲ್ಪ ಹೇಳ್ತೀರಾ..? ಸತ್ತವರ ಹೆಸರಿಗೆ ಖಾತೆ ಡಿನೋಟಿಫಿಕೇಷನ್‌ ಮಾಡೋಕೆ ಆಗುತ್ತಾ..? ಅರ್ಜಿ ಕೊಟ್ಟವರು ಯಾರು..? ನಾಲ್ಕು ವರ್ಷಗಳ ಕಾಲ ಯಾಕೆ ಸೈಲೆಂಟ್‌ ಆಗಿದ್ರಿ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್‌ ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

Tags: