Mysore
23
clear sky

Social Media

ಶುಕ್ರವಾರ, 13 ಮಾರ್ಚ್ 2026
Light
Dark

ಅಕ್ರಮ ಮರ ಕಡಿತಲೆ ತಡೆಗೆ ಸಚಿವ ಈಶ್ವರ್‌ ಖಂಡ್ರೆ ಖಡಕ್‌ ಸೂಚನೆ

ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ತಲೆದೋರಿರುವ ಅಡುಗೆ ಅನಿಲ ಅಭಾವದ ಬಿಸಿ ಇದೀಗ ರಾಜ್ಯದ ಅರಣ್ಯಗಳ ಮೇಲೆ ತಟ್ಟುವ ಆತಂಕ ಎದುರಾಗಿದೆ.

ಗ್ಯಾಸ್‌ ಸಿಲಿಂಡರ್‌ ಕೊರತೆಯಿಂದಾಗಿ ಸೌದೆಗೆ ಬೇಡಿಕೆ ಹೆಚ್ಚುತ್ತಿದ್ದು, ಅರಣ್ಯ ಲೂಟಿ ತಡೆಯಲು ಅರಣ್ಯ ಸಚಿವ ಈಶ್ವರ್‌ ಬಿ ಖಂಡ್ರೆ ಅವರು ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅರಣ್ಯ, ಸರ್ಕಾರಿ ಜಮೀನು ಅಥವಾ ರಸ್ತೆ ಬದಿಯ ಮರಗಳನ್ನು ಅಕ್ರಮವಾಗಿ ಕತ್ತರಿಸಿದರೆ ಆಯಾಯ ವಲಯದ ಅರಣ್ಯ ಅಧಿಕಾರಿಗಳನ್ನೇ ನೇರ ಹೊಣೆಯನ್ನಾಗಿ ಮಾಡಲಾಗುವುದು.

ಅಕ್ರಮ ಮರ ಕಡಿತಲೆ ತಡೆಯುವಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಮ್ಮ ಅಧಿಕೃತ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

 

Tags:
error: Content is protected !!