Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಪಾಕಿಸ್ತಾನ ವಿರುದ್ಧ ಯುದ್ಧ ಆಗಲೇಬೇಕು: ಸಚಿವ ಎಂ.ಬಿ.ಪಾಟೀಲ್‌

mb patil Pahalgam terrorist attack

ವಿಜಯಪುರ: ನೆರೆಯ ದೇಶ ಪಾಕಿಸ್ತಾನದ ವಿರುದ್ಧ ಯುದ್ಧ ಆಗಲೇಬೇಕು ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಈ ಕುರಿತು ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ಸಂಬಂಧ ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಈ ಘಟನೆಯನ್ನು ಖಂಡಿಸಬೇಕು. ಪಾಕಿಸ್ತಾನವನ್ನು ಸದೆಬಡಿಯಬೇಕು ಎಂದರು.

ಇದನ್ನೂ ಓದಿ:- ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ್‌ ಭಟ್‌

ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಬೇಕು. ಜಮ್ಮು-ಕಾಶ್ಮೀರದ ಜನರು ಭಾರತದ ಪರ ಶಾಂತಿಯ ಕಡೆ ಇದ್ದಾರೆ. ಚೀನಾ, ಅಮೇರಿಕಾ ಸೇರಿದಂತೆ ಎಲ್ಲರೂ ಸಹ ಉಗ್ರವಾದವನ್ನು ಖಂಡಿಸಬೇಕು. ಪಾಕ್‌ ಒಂದು ದರಿದ್ರ ದೇಶ. ಅಲ್ಲಿಯ ಪರಿಸ್ಥಿತಿ ಹೀನಾಯವಾಗಿದೆ. ಯುದ್ಧಕ್ಕೆ ಹೆದರಿ ಸೈನಿಕರು ಹಾಗೂ ಅಧಿಕಾರಿಗಳು ಓಡಿ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಆಯಕಟ್ಟಿನ ಜಾಗದಲ್ಲಿ ಸೇನೆಯನ್ನು ನಿಯೋಜಿಸಬೇಕು. ಪಾಕ್‌ ವಿರುದ್ಧ ಯುದ್ಧವಾಗಲೇಬೇಕು. ಪಾಕ್‌ಗೆ ತಕ್ಕ ಶಾಸ್ತಿ ಆಗಬೇಕು. ಪ್ರಧಾನಿ ಮೋದಿ ಪರ ಎಲ್ಲಾ ರಾಜಕೀಯ ಪಕ್ಷಗಳು ಇವೆ ಎಂದು ತಿಳಿಸಿದರು.

Tags:
error: Content is protected !!