ತಮಿಳುನಾಡು: ತನ್ನ ವಿಭಿನ ರೀತಿಯ ಅಭಿನ ಹಾಗೂ ವ್ಯಕ್ತಿತ್ವದಿಂದ ತಮಿಳುನಾಡು ಸಿನಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ವಿಜಯ್ ತಳಪತಿ ಇದೀಗ ಸ್ಥಳಿಯ ರಾಜಕೀಯದಲ್ಲೂ ತಮ್ಮ ಚಾಪು ಮೂಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತಮ್ಮದೇ ಪಕ್ಷ ಸ್ಥಾಪನೆ ಮಾಡುವ ಮೂಲಕ ಸಿನಿ ತಾರೆಯರು ಅಧಿಕಾರ ಚುಕ್ಕಾಣಿ ಹಿಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದಿದೆ.
ಉದಾಹರಣೆಗೆ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಂಜಿಆರ್, ಆಂಧ್ರಪ್ರದೇಶದ ಎನ್‌ಟಿಆರ್ ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸುವುದಲ್ಲದೇ, ಚುನಾವಣೆಯಲ್ಲಿ ಜಯಗಳಿಸಿ ತಮ್ಮ ರಾಜ್ಯಗಳಲ್ಲಿ ಅಧಿಕಾರ ನಡೆಸಿದ್ದಾರೆ.
ಇದೀಗ ಅದೇ ಹಾದಿಯಲ್ಲಿ ತಮಿಳುನಾಡಿನ ತಳಪತಿ, ನನ್ಬಾ ಎಂದೇ ಖ್ಯಾತರಾಗಿರುವ ಜೋಸೆಫ್ ವಿಜಯ್ ಚಂದ್ರಶೇಖರ್ ತಮ್ಮದೇ ಸ್ವಂತ ರಾಜಕೀಯ ಪಕ್ಷ ಒಂದನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪಕ್ಷ ಸ್ಥಾಪನೆ ಬಗ್ಗೆ ವಿಜಯ್ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತಾರೆ ಎನ್ನಾಲಾಗಿದೆ. ಈ ಮೂಲಕ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ವಿಜಯ್ ಸ್ಫರ್ಧಿಸುವ ತೀರ್ಮಾನ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ನಟ ಕಮಲ್ ಹಾಸನ್ ಅವರು ಈಗಾಗಲೇ ತಮಿಳುನಾಡಿನಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಇದೀಗ ವಿಜಯ್ ಕೂಡ ರಾಜಕೀಯ ಪಕ್ಷ ಸ್ಥಾಪನೆ ಮಾಡುತ್ತಿರುವುದು ಸಿನಿ ಅಭಿಮಾನಿಗಳು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಕೂತೂಹಲ ಮೂಡಿಸಿದೆ.