Mysore
25
broken clouds

Social Media

ಬುಧವಾರ, 09 ಏಪ್ರಿಲ 2025
Light
Dark

ನನ್ನನ್ನೂ ಸೇರಿದಂತೆ ಅನೇಕ ನಾಯಕರು ಮನುಷ್ಯಾರಾಗಿದ್ದರೆ ಅದಕ್ಕೆ ದೇವೇಗೌಡರೇ ಕಾರಣ : ವಿ.ಸೋಮಣ್ಣ

ಬೆಂಗಳೂರು : ನನ್ನನ್ನೂ ಸೇರಿದಂತೆ ಅನೇಕ ನಾಯಕರು ಮನುಷ್ಯಾರಾಗಿದ್ದಾರೆ ಎಂದರೆ ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಕಾರಣ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನೂ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆದಿಯಾಗಿ ಅನೇಕ ನಾಯಕರು ಮನುಷ್ಯರಾಗಿದ್ದಾರೆ ಎಂದರೆ ಅದಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಮೂಲ ಕಾರಣ ಎಂದರು.

ತಿಳಿದೊ ತಿಳಿಯದೆಯೋ ಸಿದ್ದರಾಮಯ್ಯ ಅವರು ದೇವೇಗೌಡರ ವಿಚಾರದಲ್ಲಿ ಏನಾದರು ತಪ್ಪು ಮಾಡಲು ಹೊರಟಿದ್ದರೆ ಅದು ಆಗಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕಿವಿ ಮಾತು ಹೇಳಿದರು.

ದೇವೇಗೌಡರ ದೂರದೃಷ್ಠಿ ಇಲ್ಲದಿದ್ದರೆ ನಾವು ಯಾವ ಊರಿನ ದಾಸಯ್ಯರು. ದೇವೇಗೌಡರನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡುವುದೆ ತಪ್ಪು ಅದನ್ನು ನಾವು ಇಷ್ಟಪಡುವುದಿಲ್ಲ ಎಂದರು.
ಕಳಂಕ ರಹಿತ ಸ್ವಚರಿತ್ರೆ ಇರುವಂತ ವ್ಯಕ್ತಿ ಎಂದರೆ ಅದು ದೇವೇಗೌಡ್ರು.

೯೨ ವರ್ಷದಲ್ಲೂ ಇಡೀ ದೇಶದ ಬಗ್ಗೆ ತಮ್ಮದೇ ಆದ ದೂರದೃಷ್ಠಿ ಇರುವಂತ ನಾಯ ಎಂದರೆ ಅದು ನಮ್ಮ ದೇವೇಗೌಡ ಅವರು ಮಾತ್ರ. ಅವರು ನಮ್ಮ ನಾಯಕರು, ನಮ್ಮ ರಾಜ್ಯದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.

Tags: