Mysore
19
scattered clouds

Social Media

ಸೋಮವಾರ, 26 ಜನವರಿ 2026
Light
Dark

ಮಂಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವ ವಕೀಲ

ಮಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವ ವಕೀಲರೊಬ್ಬರು ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಬಿ.ಸಿ.ರೋಡು ಕೈಕುಂಜೆ ನಿವಾಸಿ ಪ್ರಥಮ್ ಬಂಗೇರ (27) ಸದಾ ಚಟುವಟಿಕೆಯುಳ್ಳ ಪ್ರಥಮ್‌, ಎಲ್.ಎಲ್.ಬಿ.ಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿ, ಬಂಟ್ವಾಳದ ಹಿರಿಯ ವಕೀಲರೊಬ್ಬರ ಬಳಿ ಪ್ರಾಕ್ಟೀಸ್ ಮಾಡುತ್ತಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪಘಾತ ಆತನ ಪ್ರಾಣವನ್ನೇ ಕಸಿದಿತ್ತು.

ಕಳೆದ ವಾರ ಬಿ.ಸಿ.ರೋಡ್ ಮುಖ್ಯವೃತ್ತದ ಬಳಿ ಪ್ರಥಮ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿಯಾಗಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪ್ರಥಮ್ ಬಂಗೇರರ ಮೆದುಳು ರವಿವಾರ ರಾತ್ರಿ ನಿಷ್ಕ್ರಿಯಗೊಂಡಿದೆ. ವೈದ್ಯರು ಆತ ಇನ್ನು ಬದುಕುವುದಿಲ್ಲ ಎಂದು ಘೋಷಿಸಿದ್ದಾರೆ.

ಪ್ರಥಮ್ ತಂದೆ ವಾಮನ ಸಾಲ್ಯಾನ್ ಮತ್ತು ಸಹೋದರ ಆತನ ಎರಡು ಕಣ್ಣು, ಎರಡು ಕಿಡ್ನಿ, ಲಿವರ್, ಕರುಳಿನ ಭಾಗವನ್ನು ಇನ್ಯಾರದ್ದೋ ಬದುಕಿಗೆ ಬೆಳಕಾಗುವಂತೆ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಮೂಲಕ ಪ್ರಥಮ್ ಬಂಗೇರ ಸಾವಿನ ಬಳಿಕವೂ ಅಮರನಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಪ್ರಥಮ್ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.

Tags:
error: Content is protected !!