Mysore
33
few clouds

Social Media

ಬುಧವಾರ, 11 ಮಾರ್ಚ್ 2026
Light
Dark

ಮಂಗಳೂರು : ಬೃಹತ್‌ ಅಲೆಗೆ ಸಿಲುಕಿ ಹಡಗು ಮುಳುಗಡೆ ; 6 ಮಂದಿ ರಕ್ಷಣೆ

ಮಂಗಳೂರು : ಮಂಗಳೂರು ಬಂದರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣಿಸುತ್ತಿದ್ದ ಸರಕು ಹಡಕು ಬೃಹತ್‌ ಅಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದೃಷ್ಟವಶಾತ್‌ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಕೋಸ್ಟ್‌ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.

ಎಂಎಸ್‌ವಿ ಸಲಾಯತ್‌ ಎಂಬ ಹಡಗು ಮೇ 12 ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣ ಬೆಳಿಸಿತ್ತು. ಮೇ 14 ರ ಬೆಳಿಗ್ಗೆ 5;30 ರ ವೇಳೆಗೆ ಬಡಿದ ಬೃಹತ್‌ ಅಲೆಯೊಂದಕ್ಕೆ ಸಿಲುಕಿ ಮಂಗಳೂರಿನ ನೈರುತ್ಯಕ್ಕೆ 60 ನಾಟಿಕಲ್‌ ಮೈಲು ದೂರದಲ್ಲಿ ಹಡಗು ಮುಳುಗಡೆಯಾಗಿದೆ. ಆದರೆ, ನಿಖರ ಕಾರಣ ತಿಳಿದು ಬಂದಿಲ್ಲ.

ಮುಳುಗುತ್ತದ್ದ ಹಡಗಿನಲ್ಲಿದ್ದ ಸಿಬ್ಬಂದಿ ಸಣ್ಣ ಡಿಂಗಿ ದೋಣಿಯನ್ನು ಆಶ್ರಯಿಸಿ ಬದುಕುಳಿದಿದ್ದಾರೆ. ಈ ವೇಳೆ ಇದನ್ನು ಗಮನಿಸಿದ ಗಸ್ತು ತಿರುಗುತ್ತಿದ್ದ ಐಸಿಜಿ ಹಡಗು ವಿಕ್ರಮ್‌ ಡಿಂಗಿ ದೋಣಿಯಲ್ಲಿದ್ದ ಸಿಬ್ಬಂದಿಗಳನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ಗುರುವಾರ ನವ ಮಂಗಳೂರು ಬಂದರಿಗೆ ಕರೆತಂದಿದ್ದಾರೆ.

Tags:
error: Content is protected !!