Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಡಿಕೆ ಸುರೇಶ್‌ ʼಪ್ರತ್ಯೇಕ ರಾಷ್ಟ್ರʼ ಹೇಳಿಕೆಗೆ ಶಾಸಕ ನರೇಂದ್ರಸ್ವಾಮಿ ಸಮರ್ಥನೆ

ʼದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲವಾದ ಕಾರಣ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾದ ಅನಿವಾರ್ಯತೆ ಎದುರಾಗಿದೆʼ ಎಂದು ಕಾಂಗ್ರೆಸ್‌ ಸಂಸದ ಡಿಕೆ ಸುರೇಶ್‌ ನೀಡಿದ ಹೇಳಿಕೆಯನ್ನು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಇಂದು ( ಫೆಬ್ರವರಿ 2 ) ಮಾತನಾಡಿದ ಅವರು ʼರಾಜ್ಯಕ್ಕೆ ಅನ್ಯಾಯವಾಗಿದೆ. 28 ಸಂಸದರ ಪೈಕಿ ಅದರ ವಿರುದ್ಧ ದನಿ ಎತ್ತಿರುವ ಏಕೈಕ ಗಂಡು ಅವರು. ಅನ್ಯಾಯ ಆಗಿದ್ದರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆʼ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿಯಿಂದ ಹಾಗೂ ನರೇಂದ್ರ ಮೋದಿಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ ನರೇಂದ್ರಸ್ವಾಮಿ ಅದನ್ನು ಪ್ರಶ್ನಿಸಿದ ಏಕೈಕ ಸಂಸದ ಡಿಕೆ ಸುರೇಶ್‌. ಅವರು ಈ ಪ್ರಶ್ನೆಯನ್ನು ಏಕೆ ಎತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗಬೇಕು ಎಂದು ಮಾತನಾಡಿದರು.

ಇನ್ನು ಕೆರಗೋಡು ಧ್ವಜ ವಿವಾದದ ಬಗ್ಗೆಯೂ ಸಹ ಮಾತನಾಡಿದ ನರೇಂದ್ರ ಸ್ವಾಮಿ ಈ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕವಾಗಿಯೂ ಲೋಪವಾಗಿದೆ. ಅದನ್ನು ಕೆಲವರು ಪ್ರಚೋಚಿಸಲು ಬಳಸುತ್ತಿದ್ದಾರೆ. ನಮಗೆ ರಾಷ್ಟ್ರ ಧ್ವಜ ಮುಖ್ಯ. ಕೆರಗೋಡಿನಲ್ಲಿ ಹನುಮ ಧ್ವಜ ಹಾಕಲು ಏಕೆ ಬಿಟ್ಟರು, ಎಲ್ಲಿ ಲೋಪವಾಗಿದೆ ಎಂಬುದರ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದರು. ಅಲ್ಲದೇ ಕೆರಗೋಡಿನಲ್ಲಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಶಾಂತಿ ಸಭೆ ನಡೆಸಬೇಕಿದೆ. ಅದಕ್ಕೆ ಸಮಯ ಕೂಡಿ ಬರಬೇಕು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ