ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದೇಶೀಯ ಹಸುಗಳನ್ನು ರಾಜ್ಯಮಾತಾ-ಗೋಮಾತೆ ಎಂದು ಘೋಷಿಸಿದೆ.
ವೇದಗಳ ಕಾಲದಿಂದಲೂ ದೇಶೀಯ ಹಸುಗಳು ಹೊಂದಿರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಈ ಬಗ್ಗೆ ಘೋಷಣೆ ಮಾಡಲಾಗಿದೆ.
ಮಾನವನ ಪೋಷಣೆಯಲ್ಲಿ ದೇಶಿಯ ಹಸುವಿನ ಪ್ರಾಮುಖ್ಯತೆ ಬಹಳ ಮುಖ್ಯವಾಗಿದೆ. ಆಯುರ್ವೇದ ಮತ್ತು ಪಂಚಗವ್ಯ ಚಿಕಿತ್ಸೆ, ಸಾವಯವ ಕೃಷಿಯಲ್ಲಿ ಹಸುವಿನ ಗೊಬ್ಬರದ ಬಳಕೆ ಸೇರಿದಂತೆ ಇತರೆ ಅಂಶಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಹಾರಾಷ್ಟ್ರ ಸಿಎಂ ಕಚೇರಿ ಮಾಹಿತಿ ಪ್ರಕಾರ ರಾಜ್ಯ ಸಚಿವ ಸಂಪುಟವು ದೇಶಿಯ ಹಸುಗಳನ್ನು ಸಾಕಲು ದಿನಕ್ಕೆ 50 ರೂಪಾಯಿ ಸಬ್ಸಿಡಿ ಯೋಜನೆಗೆ ಅನುಮೋದನೆ ನೀಡಿದೆ.
ಇನ್ನು ದೇಶಿಯ ಹಸುಗಳು ರೈತರಿಗೆ ವರದಾನವಾಗಿರುವ ಹಿನ್ನೆಲೆಯಲ್ಲಿ ಅವುಗಳಿಗೆ ರಾಜ್ಯಮಾತಾ ಸ್ಥಾನಮಾನ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.