Mysore
16
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು ; ಓರ್ವ ಸಾವು, ಹಲವರಿಗೆ ಗಾಯ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿ ಧರೆಗೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.

ಜಾತ್ರೆಯ ಸಮಯದಲ್ಲಿ ತೇರು ಎಳೆಯುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗಾಳಿ ಸಹಿತ ಮಳೆ ಬಂದ ಪರಿಣಾಮ ತೇರು ಉರುಳಿ ಧರಗೆ ಬಿದ್ದಿದೆ. ಜಾತ್ರೆಗೆ ವಿವಿಧ ಗ್ರಾಮಗಳಿಂದ 150 ಕುರ್ಜಿಗಳು ಆಗಮಿಸಿದ್ದವು. ತೇರಿನಲ್ಲಿದ್ದ ಹಲವರಿಗೆ ಗಾಯಗಾಳಗಿವೆ.

Tags:
error: Content is protected !!