Mysore
16
clear sky

Social Media

ಶನಿವಾರ, 20 ಡಿಸೆಂಬರ್ 2025
Light
Dark

ಕರ್ನಾಟಕ ಫಿಲ್ಮ್‌ ಚೇಂಬರ್ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಿನ್ನೆ ಮುಕ್ತಾಯವಾಗಿದ್ದು, ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ ಅವರು ಆಯ್ಕೆಯಾಗಿದ್ದಾರೆ.

ನರಸಿಂಹಲು ಅವರು ತಮ್ಮ ಪ್ರತಿಸ್ಪರ್ಧಿ ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್‌ ರಾಜು ಆರ್‌ ಅವರನ್ನು ಮಣಿಸಿದ್ದಾರೆ. ಎಂ.ನರಸಿಂಹಲು ಅವರು ಆಯ್ಕೆಯಾಗುವ ಮೂಲಕ ಸಾ.ರಾ.ಗೋವಿಂದು ಬಣಕ್ಕೆ ಮತ್ತೆ ಗೆಲುವು ಸಿಕ್ಕಂತಾಗಿದೆ.

ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ವಿವಿಧ ಸ್ಥಾನಗಳಿಗಾಗಿ ಒಟ್ಟು 104 ಅಭ್ಯರ್ಥಿಗಳು ಕಣದಲ್ಲಿದ್ದರು.

ಈ ಸಲ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನವನ್ನು ಮೀಸಲಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಂ.ನರಸಿಂಹಲು ಅವರು ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ.

ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಸಫೈರ್‌ ವೆಂಕಟೇಶ್, ಪ್ರದರ್ಶಕ ವಲಯದಿಂದ ರಂಗಪ್ಪ, ವಿತರಕ ವಲಯದಿಂದ ಶಿಲ್ಪಾ ಶ್ರೀನಿವಾಸ್‌ ಆಯ್ಕೆಗೊಂಡರು.

ಇನ್ನು ಗೌರವ ಕಾರ್ಯದರ್ಶಿಯಾಗಿ ಪ್ರದರ್ಶಕ ವಲಯದಿಂದ ವೀರೇಶ್‌ ಚಿತ್ರಮಂದಿರದ ಮಾಲೀಕ ಕುಶಾಲ್‌ ಎಲ್.ಸಿ, ನಿರ್ಮಾಪಕ ವಲಯದಿಂದ ಪ್ರವೀಣ್‌ ಕುಮಾರ್‌, ವಿತರಕ ವಲಯದಿಂದ ಎಂ.ಎನ್.ಕುಮಾರ್‌ ಅವರು ಆಯ್ಕೆಗೊಂಡಿದ್ದಾರೆ.

ನಿನ್ನೆ ಮಧ್ಯಾಹ್ನದಿಂದ ಚುನಾವಣೆ ನಡೆದಿದ್ದು, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲಾಗಿದೆ.

ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಇದರಲ್ಲಿ ಪ್ರಮುಖವಾಗಿ ಸಾ.ರಾ.ಗೋವಿಂದು ಬಣ ಹಾಗೂ ಭಾಮಾ ಹರೀಶ್‌ ಅವರ ಬಣಗಳ ಮಧ್ಯೆ ಜಿದ್ದಾಜಿದ್ದಿ ನಡೆದಿತ್ತು.

ಅಂತಿಮವಾಗಿ ಸಾ.ರಾ.ಗೋವಿಂದು ಬಣಕ್ಕೆ ಜಯ ದೊರೆತಿದ್ದು, ಕುಟುಂಬದಲ್ಲೂ ಕೂಡ ಸಂತಸ ಮನೆಮಾಡಿದೆ.

 

 

 

Tags:
error: Content is protected !!