ಮೈಸೂರು: ನಾಳೆ ( ಏಪ್ರಿಲ್ 26) ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 13 ರಾಜ್ಯಗಳ ಒಟ್ಟು 89 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಸಂಜೆ ಆರರ ಬಳಿಕ ಮತದಾನ ಕೇಂದ್ರಕ್ಕೆ ಬರುವವರಿಗೆ ಮತದಾನ ಮಾಡುವ ಅವಕಾಶವಿರುವುದಿಲ್ಲ. ಆದರೆ 6 ಗಂಟೆಯ ಒಳಗೆ ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಮತದಾನ ಮಾಡುವ ಅವಕಾಶ ಇರಲಿದೆ.
ಇನ್ನು ಮತದಾನ ಮಾಡಲು ತೆರಳುವವರು ಕಡ್ಡಾಯವಾಗಿ ವೋಟರ್ ಐಡಿಯನ್ನೇ ತೆಗೆದುಕೊಂಡು ಬರಬೇಕೆಂಬ ನಿಯಮವೇನಿಲ್ಲ. ಪರ್ಯಾಯವಾಗಿ ಈ ಕೆಳಕಂಡ ದಾಖಲೆಗಳನ್ನು ತೋರಿಸಿ ಸಹ ಮತದಾರರು ತಮ್ಮ ಮತಗಳನ್ನು ಚಲಾಯಿಸಬಹುದಾಗಿದೆ.
* ಆಧಾರ್ ಕಾರ್ಡ್
* MNREGA ಜಾಬ್‌ಕಾರ್ಡ್
* ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್
* ಕಾರ್ಮಿಕ ಸಚಿವಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ
* ಪ್ಯಾನ್ ಕಾರ್ಡ್
* ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿದ ಸ್ಮಾರ್ಟ್‌ಕಾರ್ಡ್, ಭಾರತೀಯ ಪಾಸ್‌ಪೋರ್ಟ್
* ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆ
* ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಪಿಎಸ್‌ಯು ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
* ಎಂಪಿಗಳು ಅಥವಾ ಎಂಎಲ್‌ಎಗಳು ಅಥವಾ ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು
* ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಭಾರತ ಸರ್ಕಾರ ನೀಡಿರುವ ವಿಶಿಷ್ಟ ಅಂಗವೈಕಲ್ಯ ಐಡಿ ( ಯುಐಐಡಿ ) ಕಾರ್ಡ್