ಬೆಂಗಳೂರು: ಕರ್ನಾಟಕದ ಎಲ್ಲಾ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವು ಏಕಕಾಲದಲ್ಲಿ ಇಂದು(ಜೂನ್ 4) ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಒಂದೆಡೆ ಚುನಾವಣೆ ಫಲಿತಾಂಶದ ಕುತೂಹಲ, ಇನ್ನೊಂದೆಡೆ ಮತ ಎಣಿಕೆ ಆರಂಭದ ವೇಳೆ ರಾಜ್ಯದ ಕೆಲವೆಡೆ ಎಡವಟ್ಟುಗಳು ಆದವು. ಅದರ ಮಾಹಿತಿ ಇಲ್ಲಿದೆ.
ಸ್ಟ್ರಾಂಗ್ ರೊಂ ಕೀ ಮರೆತು ಬಂದ ಅಧಿಕಾರಿ
ವಿಜಯಪುರಲ್ಲಿ ಸ್ಟ್ರಾಂಗ್ ರೊಂ ಓಪನ್ ವೇಳೆ ಅಧಿಕಾರಿ ಪೇಚಿಗೆ ಸಿಲುಕಿದ್ದಾರೆ. ವಿಜಯಪುರ ಲೋಕಸಭಾ ಚುನಾವಣೆ ಮತ ಎಣಿಕೆಯ ಅಧಿಕಾರಿ ಸ್ಟ್ರಾಂಗ್ ರೊಂ ಕೀಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ಬಳಿಕ ಕೀ ತರಲು ಮನೆಗೆ ಹೋಗಿ ತಡವಾಗಿ ಕೀ ತಂದಿದ್ದಾರೆ
ಮೊಬೈಲ್‌ಗಾಗಿ ಏಜೆಂಟ್ ಹಾಗೂ ಪೊಲೀಸರ ಮಧ್ಯೆ ವಾಗ್ವಾದ
ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ತೆಗೆದುಕೊಂಡು ಹೋಗಲು ಚುನಾವಣಾ ಏಜೆಂಟ್‌ಗಳಿಗೆ ಅವಕಾಶವಿದ್ದರೂ ಪೊಲೀಸರು ತಡೆದರು. ಈ ವೇಳೆ ಪೋಲಿಸ್ ಹಾಗೂ ಏಜೆಂಟರ ನಡುವೆ ವಾಗ್ವಾದ ನಡೆಯಿತು. ಬಳಿಕ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತು ಸ್ಥಳಕ್ಕೆ ಬಂದು ಮನವೊಲಿಕೆ ಮಾಡಿದರು.
ಎಣಿಕೆ ಕೇಂದ್ರದಲ್ಲಿಯೂ ಕೇಸರಿ ಶಾಲು ಪ್ರದರ್ಶನ
ಬೀದರ್‌ನಲ್ಲಿ ಬಿಜೆಪಿ ಏಜೆಂಟ್‌ಗಳು ಮತ ಎಣಿಕೆ ಕೇಂದ್ರಕ್ಕೆ ಕೇಸರು ಸಾಲು ಧರಿಸಿಕೊಂಡು ಬಂದರು. ಈ ವೇಳೆ ಬಿಜೆಪಿ ಏಟೆಂಜರು ಶಕ್ತಿ ಪ್ರದರ್ಶಿಸಿದರು. ಇದರಿಂದ ಕೆಲಕಾಲ ಗೊಂದಲವು ಉಂಟಾಗಿತ್ತು.
ವರುಣಾದಲ್ಲಿ ಕೈಕೊಟ್ಟ ಮತ ಯೂನಿಟ್
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವರುಣಾದಲ್ಲಿ 1 ನೇ ಯೂನಿಟ್ ತಾಂತ್ರಿಕ ಕಾರಣದಿಂದ ಕೈಕೊಟ್ಟಿದ್ದು, ಇದರಿಂದ ಮತ ಎಣಿಕೆ ಕಾರ್ಯ ವಿಳಂಬವಾಯಿತು.
ಮತ ಎಣಿಕೆ ಅಧಿಕಾರಿ ಅಸ್ವಸ್ಥ
ವಿಜಯಪುರದಲ್ಲಿ ಮತ ಎಣಿಕೆ ವೇಳೆ ಅಧಿಕಾರಿ ಅಸ್ವಸ್ಥಗೊಂಡರು. ಮತ ಎಣಿಕೆ ಸೂಪರ್‌ವೈಸರ್ ಸಿದ್ದರಾಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಇವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು.
ಮತ ಎಣಿಕೆ ಕೇಂದ್ರದಲ್ಲಿ ಏಜೆಂಟ್‌ಗಳಿಗೆ ಕುರ್ಚಿ ಕೊರತೆ
ರಾಯಚೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಏಜೆಂಟರುಗಳಿಗೆ ಕುರ್ಚಿ ಕೊರತೆ ಉಂಟಾಗಿದ್ದು, ಏಜೆಂಟರು ಕುಳಿತುಕೊಳ್ಳಲು ಚೇರ್ ಇಲ್ಲದೇ, ಅಂಚೆ ಮತದಾನ ಎಣಿಕೆ ವಿಳಂಬವಾಗಿತ್ತು.