Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ರಾಜ್ಯದ ೩೦ ಕಡೆ ಅಧಿಕಾರಿಗಳಿಂದ ದಾಳಿ

ಬೆಂಗಳೂರು : ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ ಕೊಟ್ಟಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ೩೦ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಬ್ಬರು ಲೋಕಾಯುಕ್ತ ಎಸ್ಪಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ರಾಜ್ಯದ ಒಟ್ಟು ೧೨ ಕೇಸ್‌ ಗಳಲ್ಲಿ ಭಾಗಿಯಾಗಿದ್ದವರ ಮನೆಗಳ ಮೇಲೆ ದಾಳಿ ನಡೆದಿದೆ.

ರಾಜ್ಯದ ೩೦ ಕಡೆ ಒಟ್ಟು ನೂರಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ತುಮಕೂರಿನ ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಮುದ್ದುಕುಮಾರ್‌, ಯಾದಗಿರಿ ಜಿಲ್ಲಾಪಂಚಾಯತ್‌ ಯೋಜನಾ ನಿರ್ದೇಶಕರು ಬಲವಂತ್‌ ರಾಥೋಡ್‌, ಹೆಬ್ಬಗೋಡಿ ನಗರಸಭೆ ಆಯುಕ್ತ ಕೆ.ನರಸಿಂಹ ಮೂರ್ತಿ, ಬೆಂಗಳೂರಿನ ಕೆಐಡಿಬಿ ಅಧಿಕಾರಿ ಬಿ.ವಿ ರಾಜಾ. ಕಮರ್ಷಿಯಲ್‌ ಟ್ಯಾಕ್ಸ್‌ ಜಂಟಿ ಆಯುಕ್ತ ರಮೇಶ್‌ ಕುಮಾರ್‌, ಹಾಗೂ ದೊಡ್ಡಬಳ್ಳಾಪುರದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಆರ್.ಸಿದ್ದಪ್ಪ, ಶಿವಮೊಗ್ಗದ ತೋಟಗಾರಿಕೆ ಇಲಾಖೆಯ ಡೆಪ್ಯುಟಿ ಡೈರೆಕ್ಟರ್‌ ಪ್ರಕಾಶ್‌, ಮಂಡ್ಯ ಕಾರ್ಮಿಕ ಅಧಿಕಾರಿ ಚೇತನ್‌ ಕುಮಾರ್‌, ಮಂಗಳೂರಿನ ಮಹಾನಗರ ಪಾಲಿಕೆಯ ಆಯುಕ್ತ ಆನಂದ್‌ ಸಿಎಲ್‌, ಬೆಂಗಳೂರು ಉತ್ತರಉಪವಿಭಾಗದ ಎಫ್‌ ಡಿಎಟಿಆರ್‌ ಮಂಜುನಾಥ್‌ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ

Tags: