Mysore
21
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಬಿಜೆಪಿ ರಾಜ್ಯಾಧ್ಯಕ್ಷರ ಪತ್ನಿಯ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ : ಯಾದಗಿರಿ ಜಿಲ್ಲೆಯಲ್ಲಿ ಡಿಎಚ್‌ಓ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ಪ್ರಭುಲಿಂಗ ಮಾನಕರ ನಿವಾಸ ಮತ್ತು ಫಾರ್ಮ್‌ ಹೌಸ್‌ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ ಮಾಡಿದೆ.

ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಅವರ ಪತ್ನಿಯ ಸಹೋದರರಾಗಿರುವ ಪ್ರಭುಲಿಂಗ ಅವರ ಕಲಬುರಗಿ ಕರುಣೇಶ್ವರ ಕಾಲೋನಿ, ಫಾರ್ಮ್‌ ಹೌಸ್‌ ಮತ್ತು ಯಾದಗಿರಿಯ ಕಚೇರಿ ಮೇಲೆ ಇಂದು (ಮಂಗಳವಾರ) ಬೆಳಿಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಅಗತ್ಯ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮೈಸೂರಲ್ಲೂ ಭ್ರಷ್ಟರ ಭೇಟೆ : ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ಎಂ.ಎಸ್‌ ಗ್ರೂಪ್‌ ಕಂಪನಿಗೆ ಸೇರಿದ ಮೈಸೂರಿನಲ್ಲಿ ಸುಮಾರು 12 ಕಡೆಗಳಲ್ಲಿ ಎಡಿಜಿಪಿ ಪ್ರಶಾಂತ್‌ ಕುಮಾರ್‌, ಐಜಪಿ ಸುಬ್ರಮಣೇಶ್ವರ ರಾವ್‌ ನೇತೃತ್ವದ ಲೋಕಾಯುಕ್ತ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ಜೊತೆಗೆ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಅವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಿದ್ದಾರೆ.

ಬಳ್ಳಾರಿ ಮತ್ತು ವಿಜಯನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಳ್ಳಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚಂದ್ರಶೇಖರ ಹಾಗೂ ಅರಣ್ಯ ಇಲಾಖೆಯ ಡಿಆರ್ ಎಫ್ ಓ ಅವರ ಬಳ್ಳಾರಿ, ಗಂಗಾಗವತಿ ಮತ್ತು ಹೊಸಪೇಟೆ, ಕಂಪ್ಲಿಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ ನಡಿದ್ದ, ಬೆಂಗಳೂರಿನ 3 ಕಡೆ ಸೇರಿ ರಾಜ್ಯದ 63 ಕಡೆ ದಾಳಿ ನಡೆಸಿದೆ. ಭ್ರಷ್ಟಾಚಾರ ಆರೋಪ ಇನ್ನೆಲೆಯ ಅಧಿಕಾರಿಗಳ ಮನೆ ಹಾಗೂ ಇತರ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!