ಬೆಂಗಳೂರು: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಮುಖವಾಗಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಅಗ್ರಸ್ಥಾನದಲ್ಲಿದೆ. ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ತದನಂತರ ಮುಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳು ಟಾಪ್ 3 ಪಟ್ಟಿಯಲ್ಲಿವೆ.
2024ರಿಂದ 2025ರವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 155.95 ಕೋಟಿ ಆದಾಯ ಹರಿದುಬಂದಿದೆ. ನಂತರ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ 2024ರಿಂದ 2025ನೇ ಸಾಲಿನಲ್ಲಿ 71.93 ಕೋಟಿ ಗಳಿಸಿದೆ. ಅದೇ ರೀತಿ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆದಾಯವು 2024-25ರಲ್ಲಿ 50.68 ಕೋಟಿ ಗಳಿಸಿದೆ.
ಕರ್ನಾಟಕದ ಶ್ರೀಮಂತ ದೇವಸ್ಥಾನದ ಪಟ್ಟಿಯಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನವು 5ನೇ ಸ್ಥಾನದಲ್ಲಿದ್ದು, 2024-25ರಲ್ಲಿ 36.12 ಕೋಟಿ ಆದಾಯ ಗಳಿಸಿದೆ. ಅದೇ ರೀತಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆದಾಯವು 29.95 ಕೋಟಿ ದಾಟಿ ನಂತರದ ಸ್ಥಾನ ಪಡೆದಿದೆ.




