Mysore
22
scattered clouds

Social Media

ಗುರುವಾರ, 26 ಫೆಬ್ರವರಿ 2026
Light
Dark

ಆರ್‌ಟಿಸಿ-ಆಧಾರ್‌ ಕಾರ್ಡ್‌ ಜೋಡಣೆ : 88 ಸಾವಿರ ಆರ್‌ಟಿಸಿಗಳಲ್ಲಿ ಕೃಷಿ ಭೂಮಿ ಪತ್ತೆ !

ಬೆಂಗಳೂರು : ಗ್ರಾಮ ಲೆಕ್ಕಿಗರ ಮನೆ ಬಾಗಿಲಿಗೆ ತೆರಳಿ ಆರ್‌ಟಿಸಿ-ಆಧಾರ್‌ ಜೋಡಣೆ ಕೆಲಸದಲ್ಲಿ ತೊಡಗಿದ್ದಾರೆ. 88 ಸಾವಿರ ಆರ್‌ಟಿಸಿಗಳಲ್ಲಿ ಕೃಷಿ ಭೂಮಿ ಇರುವುದು ಕಂಡುಬಂದಿದೆ. ಆಧಾರ್‌ ಲಿಂಕ್‌ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್‌ ಬಂದ್‌ ಮಾಹಿತಿ ಪಡೆಯಬೇಕು.

ನಿಖರವಾದ ಆಕಾರ್‌ ಬಂದ್‌ ಇಲ್ಲದೇ ಆರ್‌ಟಿಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್‌ ಬಂದ್‌ ಡಿಜಿಟಲೀಕರಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಆರ್‌ ಟಿಸಿ-ಆಧಾರ್‌ ಜೋಡಣೆ ಕೆಲಸ ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದ್ದು, ಈವರೆಗೆ ೧೫ ಲಕ್ಷ ಆರ್‌ ಟಿಸಿ ಮಾಲೀಕರನ್ನು ಸಂಪರ್ಕಿಸಲಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಎಲ್ಲ ಆರ್‌ ಟಿಸಿ ಮಾಲೀಕರನ್ನು ತಲುಪಲು ರೂಪುರೇಷೆ ಸಿದ್ದಪಡಿಸಲಾಗಿದೆ ಎಂದು ಹೇಳಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!