ಬೆಂಗಳೂರು: ಪ್ರಮುಖ ಸರ್ಕಲ್‌ಗೆ ನಟಿ ಲೀಲಾವತಿ ಹೆಸರು ಇಡಬೇಕು ಅಂತಾ ಬಿಬಿಎಂಪಿಗೆ ಪಾಲಿಕೆ ನೌಕರರ ಸಂಘ ಆಗ್ರಹಿಸಿದೆ.
ನಗರದ ನಾಯಂಡಹಳ್ಳಿ ಸರ್ಕಲ್‌ಗೆ ಲೀಲಾವತಿ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ನಟಿ ಲೀಲಾವತಿ ಹೆಸರು ಅಜರಾಮರವಾಗಿ ಉಳಿಯಬೇಕು. ಹಲವು ಗಣ್ಯರ ಹೆಸರು ನಗರದ ರಸ್ತೆ, ವೃತ್ತಕ್ಕೆ ಇಡಲಾಗಿದೆ. ಇದೇ ಮಾದರಿಯಲ್ಲಿ ಲೀಲಾವತಿ ಹೆಸರಿಡುವುದು ಸೂಕ್ತ.
ಮನವಿಯನ್ನ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ.