Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮುಂದಿನ ಶುಕ್ರವಾರ ಮತ್ತೆ ಕೆಫೆ ಲಾಂಚ್‌ ಮಾಡೋಣ : ರಾಘವೇಂದ್ರ ರಾವ್‌ !

ಬೆಂಗಳೂರು : ಮುಂಬರುವ ಶುಕ್ರವಾರ ಶಿವರಾತ್ರಿಯಂದು ರಾಮೇಶ್ವರಂ ಕೆಫೆ ಮತ್ತೆ ಲಾಂಚ್‌ ಮಾಡೋಣ ಎಂದು ಕೆಫೆ ಮಾಲೀಕರಾದ ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

ನೆನ್ನೆ ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಪೋಟ ರಾಜ್ಯ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಇದೀಗ ಈ ವಿಚಾರದ ಕುರಿತು ಮಾಲೀಕರಾದ ರಾಘವೇಂದ್ರ ರಾವ್‌ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪ್ರಾರಂಭದ ಹಂತದಿಂದಲೂ ಒಂದಲ್ಲಾ ಒಂದು ಕಷ್ಟಗಳು ಎದುರಾಗಿದೆ. ಆದರೆ ಅದನ್ನೆಲ್ಲ ಮೆಟ್ಟಿಲುಗಳನ್ನಾಗಿಸಿಕೊಂಡು ಈ ಹಂತಕ್ಕೆ ಬಂದು ತಲುಪಿದ್ದೇವೆ ಎಂದರು.

ಇನ್ನು ಮುಂದಕ್ಕೆ ಯಾರ್ಯಾರು ಬರುತ್ತಾರೆ ನೋಡೋಣ ಎಲ್ಲವನ್ನು ಎದುರಿಸೋಣ. ನಮಗೆ ಕನ್ನಡಿಗರೆಲ್ಲರ ಬೆಂಬಲವಿರಲಿ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಪೊಲೀಸ್‌ ಆಯುಕ್ತರಾದ ಬಿ.ದಯಾನಂದ್‌ ಸೇರಿದಂತೆ ಎಲ್ಲಾ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಮಾಧ್ಯಮದವರು ಈ ಸಂದರ್ಭದಲ್ಲಿ ನಮ್ಮ ಜೊತೆ ನಿಂತಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಬರುವ ಶುಕ್ರವಾರ ಶಿವರಾತ್ರಿ ದಿನದಂದು ಇದೇ ಜಾಗದಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕೆಫೆ ಪ್ರಾರಂಭ ಮಾಡೋಣ. ಅದಕ್ಕೆ ನೀವೆಲ್ಲರೂ ಬಂದು ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ