Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ಎಚ್‌ಡಿಕೆಯನ್ನು ಸಿಎಂ ಮಾಡ್ತೀವಿ ಎಂದು ವಿಜಯೇಂದ್ರ, ಅಶೋಕ್‌ ಹೇಳಲಿ: ದಿನೇಶ್‌ ಗುಂಡೂರಾವ್‌ ಸವಾಲು

dinesh gundurao

ಬೆಂಗಳೂರು: ನಾವು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಿಜಯೇಂದ್ರ ಹಾಗೂ ಆರ್.‌ಅಶೋಕ್‌ ಹೇಳಲಿ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸವಾಲು ಹಾಕಿದ್ದಾರೆ.

ಎರಡು ದಿನಗಳ ಹಿಂದೆ ಹಾಸನದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಎಚ್‌ಡಿಕೆ ಸಿಎಂ ವಿಚಾರ ಪ್ರಸ್ತಾಪವಾಗಿತ್ತು.

ಈ ವಿಚಾರ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಲಿ. ಬಿಜೆಪಿ ಒಬ್ಬ ಮುಖಂಡ ಹೇಳಲಿ. ಸುಮ್ಮನೆ ಜೆಡಿಎಸ್‌ನವರು ಹೇಳಿದರೆ ಅದು ಮುಖ್ಯವಲ್ಲ. ಕುಮಾರಸ್ವಾಮಿ ಸಿಎಂ ಮಾಡುತ್ತೇವೆ ಎಂದು ಅಶೋಕ್‌, ವಿಜಯೇಂದ್ರ ಹೇಳಲಿ ಎಂದು ಟಾಂಗ್‌ ಕೊಟ್ಟರು.

Tags:
error: Content is protected !!