ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೊಸ ಸಂಸತ್ ಭವನದ ಮೇಲೆ ನಡೆದ ಭದ್ರತಾ ಲೋಪ ಕುರಿತಾಗಿ ಬಿಜೆಪಿಯ ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ವಿಶೇಷ ಘಟಕದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪ್ರತಾಪ್ ಸಿಂಹ ಅವರಿಗೆ ನೋಟಿಸ್ ನೀಡಲು ಮುಂದಾಗಿದೆ.
ಮುಂದಿನ ವಾರ ನೋಟಿಸ್ ನೀಡುವ ಸಂಭವ ಹೆಚ್ಚಾಗಿದ್ದು, ಪ್ರಕರಣ ಕುರಿತಂತೆ ದೆಹಲಿ ವಿಶೇಷ ಘಟಕದ ಅಪರಾಧ ವಿಭಾಗದ ಹಿರಿಯ ನೇತೃತ್ವದ ಪೊಲೀಸ್ ತಂಡ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.
ಸಂಸತ್ ಒಳಗೆ ಪ್ರವೇಶಿಸಿದ್ದ ಇಬ್ಬರಲ್ಲಿ ಒಬ್ಬಾತ ಉತ್ತರಪ್ರದೇಶದ ಲಖ್ನೋ ನಿವಾಸಿಯಾಗಿದ್ದರೆ, ಮತ್ತೋರ್ವ ಮೈಸೂರಿನ ಮನೋರಂಜನ್. ಈ ಇಬ್ಬರಿಗೂ ಪ್ರತಾಪ್ ಸಿಂಹ ಅವರ ಆಪ್ತ ಕಾರ್ಯದರ್ಶಿ ಸಂಸತ್ ಭವನದೊಳಗೆ ಪ್ರವೇಶ ಪಡೆಯಲು ತಮ್ಮ ಅನುಮತಿಯುಳ್ಳ ಪಾಸ್ ನೀಡಿದ್ದರು.