Mysore
20
overcast clouds
Light
Dark

ಸೂರಜ್‌ ಬಿಡುಗಡೆ ಕೋರಿ ಇಂದು ಜಾಮೀನು ಅರ್ಜಿ ಸಲ್ಲಿಕೆ: ವಕೀಲ್‌ ನಿಖಿಲ್‌ ಕಾಮತ್‌

ಬೆಂಗಳೂರು: ಅಸಹಜ ಲೈಂಗಿಕ ದೌರ್ಜಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಪರ ಸೊಮವಾರ (ಜೂನ್‌.24) ಜಾಮೀನು ಅರ್ಜಿ ಸಲ್ಲಿಸುವುದಾಗಿ ಸೂರಜ್‌ ಪರ ವಕೀಲರಾದ ನಿಖಿಲ್‌ ಕಾಮತ್‌ ಹೇಳಿದ್ದಾರೆ.

42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಸಿಐಡಿ ಸೂರಜ್‌ ರೇವಣ್ಣ ಅವರನ್ನು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳ ಮುಂದಿನ ನಡೆ ಅನುಸರಿಸಿ ಸೂರಜ್‌ ಬಂಧನ ವಿರುದ್ಧ ಜಾಮೀನು ಅರ್ಜಿಸಿ ಸಲ್ಲಿಸುವುದಾಗಿ ವಕೀಲರಾದ ಕಾಮತ್‌ ಹೇಳಿದ್ದಾರೆ.