ಬೆಂಗಳೂರು: ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ರಜನಿಕಾಂತ್ ಪತ್ನಿ ಲತಾ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಪುತ್ರಿ ಸೌಂದರ್ಯ ನಿರ್ದೇಶನದ ಕೊಚಾಡಿಯನ್ ಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಲತಾ ಅವರು ಮೇಲೆ ಐಪಿಸಿ 463 ಅಡಿ ಕೇಸ್ ದಾಖಲಾಗಿತ್ತು. ಕೊಚಾಡಿಯನ್ ಬಿಡುಗಡೆಗೆ ಸಂಬಂಧಿಸಿದಂತೆ ಎರಡು ಕಂಪೆನಿಗಳ ಜೊತೆ ಒಪ್ಪಂದವಾಗಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಶ್ಯೂರಿಟಿ ನೀಡಿದ್ದರು.
ಸಿನಿಮಾ ಲಾಸ್ ಆದ ಹಿನ್ನೆಲೆಯಲ್ಲಿ ನಷ್ಟ ತುಂಬಿ ಕೊಡುವಲ್ಲಿ ಲತಾ ವಿಫಲರಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಚಿತ್ರಕ್ಕೆ ನಷ್ಟವಾದ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2015ರ ಮೇ 30ರಂದು ಎಫ್.ಐ.ಆರ್ ದಾಖಲಾಗಿತ್ತು.
ಇದೀಗ 2024 ಜನವರಿ 6ರ ಒಳಗೆ ಖುದ್ದಾಗಿ ಕೋರ್ಟಿ ಹಾಜರಾಗುವಂತೆ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಸೂಚಿಸಿದೆ. ಲತಾ ಅವರ ಮೇಲಿರೋದು ಜಾಮೀನು ರಹಿತ ಪ್ರಕರಣ ಆಗಿದ್ದರಿಂದ ಖುದ್ದಾಗಿ ಹಾಜರಾಗಬೇಕೆಂದು ವಕೀಲರು ಮನವಿ ಮಾಡಿದ್ದರು.